ನಾನೊಬ್ಬ ಹಿಂದೂ ಆಗಿ ಟಿಕೆಟ್ ಬಿಟ್ಟುಕೊಡಲು ಸಿದ್ಧ-ಬಿ.ಕೆ ಹರಿಪ್ರಸಾದ್ ಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು.

Promotion

ಶಿವಮೊಗ್ಗ,ಫೆಬ್ರವರಿ,28,2022(www.justkannada.in):  ಇತ್ತೀಚೆಗೆ ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಧ್ಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಈಶ್ವರಪ್ಪ, ನಾನೊಬ್ಬ ಹಿಂದೂ ಆಗಿ ಟಿಕೆಟ್ ಬಿಟ್ಟುಕೊಡಲು ಸಿದ್ಧ.  ಆದ್ರೆ ಮುಸ್ಲೀಂರಿಗೆ ಟಿಕೆಟ್ ಬಿಟ್ಟುಕೊಡಲ್ಲ.  ನಮ್ಮ ಪಕ್ಷ ಹೇಳಿದ್ರೆ ಟಿಕೆಟ್ ಬಿಟ್ಟು ಕೊಡುವೆ.  ಹರಿಪ್ರಸಾದ್ ಪರಿಷತ್ ವಿಪಕ್ಷ ಸ್ಥಾನ ಬಿಟ್ಟುಕೊಡ್ತಾರಾ..?  ಸಿಎಂ ಇಬ್ರಾಹಿಗೆ ಸ್ಥಾನ ಬಿಟ್ಟು ಕೊಡ್ತಾರಾ..?  ಎಂದು ಟಾಂಗ್ ನೀಡಿದರು.

ಮುಸ್ಲೀಂರನ್ನ ಕಾಂಗ್ರೆಸ್ ನಾಯಕರು ಬಳಸಿಕೊಳ್ಳುತ್ತಾರೆ. ಆದರೆ ಯಾವುದೇ ಸ್ಥಾನ ಮಾನ ನೀಡಲ್ಲ.  ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ. ಹಿಜಾಬ್ ನಿಂದ ಮುಸ್ಲೀಂರ ವೋಟು ಸಿಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದರು.

Key words: minister-K.S Eshwarappa-BJP-ticket