ಪಾದಯಾತ್ರೆ ಮಾಡೋ ಬದಲು ಸಿದ್ಧು-ಡಿಕೆಶಿ ನಿಯೋಗ ಕರೆದುಕೊಂಡು ಹೋಗಲಿ- ಮಾಜಿ ಸಚಿವ ಸಿ.ಟಿ ರವಿ.

ಬೆಂಗಳೂರು,ಫೆಬ್ರವರಿ,28,2022(www.justkannada.in): ಕಾಂಗ್ರೆಸ್ ಪಾದಯಾತ್ರೆಗೆ ರಾಜಕಾರಣ ಬಿಟ್ಟು ಬೇರೆನೂ ಕಾರಣ ಇಲ್ಲ. ಪಾದಯಾತ್ರೆ  ಮಾಡೋ ಬದಲಿಗೆ ಕಾಂಗ್ರೆಸ್ ನಿಯೋಗ ಹೋಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದರು.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕಿಸಿದ ಮಾಜಿ ಸಚಿವ ಸಿ.ಟಿ ರವಿ, ಪಾದಯಾತ್ರೆಗೆ ರಾಜಕಾರಣ ಬಿಟ್ಟರೇ ಬೇರೆನೂ ಇಲ್ಲವೆಂದು ಎಲ್ಲರಿಗೂ ಸ್ಪಷ್ಟವಾಗಿದೆ. ನಮ್ಮ ಪ್ರಶ್ನೆಗಳಿಗೆ ಇವತ್ತಿನವರೆಗೂ ಉತ್ತರ ಕೊಟ್ಟಿಲ್ಲ. ನೀವು ಇಲ್ಲಿ ಪಾದಯಾತ್ರೆ ನಾಟಕವನ್ನು ಮಾಡುವುದರ ಬದಲಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಿಯೋಗ ಕರೆದುಕೊಂಡು ತಮಿಳುನಾಡಿಗೆ ಹೋಗಿ. ಚಿದಂಬರಂ, ಡಿಎಂಕೆ ಸ್ಟಾಲಿನ್ ಅವರನ್ನು ಒಪ್ಪಿಸಿ ಎಂದು ಸಲಹೆ ನೀಡಿದರು.

ಪಾದಯಾತ್ರೆ ಕೇವಲ ದೈಹಿಕ ಕಸರತ್ತು ಕೊಡಬಹುದು. ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಇಲ್ಲ.  ಸಿದ್ದು ಡಿಕೆಶಿ ನಿಯೋಗ ಕರೆದುಕೊಂಡು ಹೋಗಲಿ ಅದನ್ನ ಬಿಟ್ಟು ಪಾದಯಾತ್ರೆ ಮಾಡ್ತಾ ಇದ್ದಾರೆ ಎಂದು ಲೇವಡಿ ಮಾಡಿದರು.

Key words: mekedatu-plan-delegation -CT Ravi.