ಸುತ್ತೂರು ಮಠಕ್ಕೆ ಸಚಿವ ಮಾಧುಸ್ವಾಮಿ , ಶಾಸಕ ಮುನಿರತ್ನ ಭೇಟಿ…

Promotion

ಮೈಸೂರು,ಜನವರಿ,22,2021(www.justkannada.in):  ಮೈಸೂರಿನ ಸುತ್ತೂರು ಮಠಕ್ಕೆ  ವೈದ್ಯಕೀಯ ಶಿಕ್ಷಣ ಸಚಿವ ಮಾಧುಸ್ವಾಮಿ ಇವರ ನಂತರ ಶಾಸಕ ಮುನಿರತ್ನ ಭೇಟಿ ನೀಡಿದ್ದಾರೆ.jk

ಖಾತೆ ಬದಲಾವಣೆ ಮಾಡಿದ ಬೆನ್ನಲ್ಲೇ ಸುತ್ತೂರು ಮಠಕ್ಕೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ದಾರೆ. ಮಠದಲ್ಲಿ ಸಚಿವ ಮಾಧುಸ್ವಾಮಿ  ಅವರು ಭೋಜನ ಸವಿದರು.

ತಮಗೆ ನೀಡಲಾಗಿದ್ದ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಖಾತೆ ಹಿಂಪಡೆದು ವೈದ್ಯಕೀಯ ಶಿಕ್ಷಣ ಖಾತೆ ನೀಡಿದ್ದು ಖಾತೆ ಬದಲಾವಣೆ ಹಿನ್ನೆಲೆ ಸುತ್ತೂರು ಶ್ರೀಗಳೊಂದಿಗೆ ಸಚಿವ ಮಾಧುಸ್ವಾಮಿ ಸುಧೀರ್ಘ ಮಾತುಕತೆ ನಡೆಸಿದರು. ಶ್ರೀಗಳ ಜತೆ ಒಂದು ಗಂಟೆಗೂ ಹೆಚ್ಚುಕಾಲ ಸಚಿವ ಮಾಧುಸ್ವಾಮಿ ಸಮಾಲೋಚನೆ ಮಾಡಿದರು.minister-jc-madhuswamy-mla-muniratna-visit-mysore-suttur-math

ಇನ್ನು ಶ್ರೀಗಳ ಭೇಟಿಗಾಗಿ ಪ್ರತ್ಯೇಕವಾಗಿ ಶಾಸಕ ಮುನಿರತ್ನ ಕಾದುಕುಳಿತ ಘಟನೆ ನಡೆಯಿತು. ಸಚಿವ ಮಾಧುಸ್ವಾಮಿ ಹೊರ ಬಂದ ಬಳಿಕ ಒಳ ಹೋಗಲು ಶಾಸಕ ಮುನಿರತ್ನ ಕಾದು ಕುಳಿತರು.

Key words: minister-JC  Madhuswamy-MLA –muniratna-Visit –mysore- suttur math