“ಜಿಟಿಡಿ ಕುಟುಂಬವನ್ನ ರಾಜಕೀಯವಾಗಿ‌ ಮುಗಿಸುವುದಕ್ಕೆ ಸಾಧ್ಯವಿಲ್ಲ : ಹರೀಶ್ ಗೌಡ

ಮೈಸೂರು,ಜನವರಿ,22,2021(www.justkannada.in) : ಜಿಟಿಡಿ ಕುಟುಂಬವನ್ನ ಯಾರಿಂದಲೂ ಕೂಡ ರಾಜಕೀಯವಾಗಿ‌ ಮುಗಿಸುವುದಕ್ಕೆ ಸಾಧ್ಯವಿಲ್ಲ. ಅದು ಜನರ ಕೈಯಲ್ಲಿದೆ ಎಂದು ಶಾಸಕ ಜಿಟಿಡಿ ಪುತ್ರ ಹರೀಶ್ ಗೌಡ ಟಾಂಗ್ ನೀಡಿದ್ದಾರೆ.jk

ಪಕ್ಷದಲ್ಲಿ ಅಸಮಾಧಾನ ಇರುವುದು ಸಹಜ. ಅಂದ ಮಾತ್ರಕ್ಕೆ ನಾವು ಪಕ್ಷದಿಂದ ದೂರ ಹೋಗಿಲ್ಲ. ನನ್ನ ಮತ್ತು ನಿಖಿಲ್ ಕುಮಾರಸ್ವಾಮಿ ಸ್ನೇಹ ಗಟ್ಟಿಯಾಗಿದೆ, ಉತ್ತಮವಾಗಿದೆ ಎಂದಿದ್ದಾರೆ.

ಜೆಡಿಎಸ್ ವೀಕ್ಷಕರ ಪಟ್ಟಿಯಲ್ಲಿ ಶಾಸಕ ಜಿಟಿ ದೇವೇಗೌಡರ ಹೆಸರು ಸೇರಿಸದ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮನ್ನು ಕರೆದು ಪಟ್ಟಿ ಮಾಡಿಲ್ಲ. ಪಟ್ಟಿ ಮಾಡಿರುವವರನ್ನ‌ ಕೇಳಿದರೆ ಎಲ್ಲಾವೂ ಗೊತ್ತಾಗುತ್ತದೆ. ನನ್ನ ಮತ್ತು ನನ್ನ ತಂದೆಯ ಗಮನಕ್ಕೆ ತರದೇ ಪಟ್ಟಿ ಮಾಡಲಾಗಿದೆ. ನನಗೆ ಯಾವುದೇ ರೀತಿಯ ಅಸಮಾಧಾನ, ಬೇಸರ ಇಲ್ಲ. ನಮ್ಮ ಕಾರ್ಯಕರ್ತರು ನಮ್ಮ ಕುಟುಂಬದ ಜೊತೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಹೇಳಿದರು. GTD-family-finish-politically-Cannot-Harish Gowda

ಅವರ ಪ್ರೀತಿಯನ್ನು ನಾವು ಉಳಿಸಿಕೊಳ್ಳುತ್ತೆವೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಜೆಡಿಎಸ್ ಶಾಸಕರಾಗಿಯೇ ಈ ಅವಧಿಯನ್ನು ನಮ್ಮ ತಂದೆಯವರು ಪೂರ್ಣಗೊಳಿಸುತ್ತಾರೆ ಎಂದು ಜೆಡಿಎಸ್ ನಲ್ಲೇ ಇರುವುದಾಗಿ ಜಿಟಿಡಿ ಪುತ್ರ ಹರೀಶ್ ಗೌಡ ಸ್ಪಷ್ಟಪಡಿಸಿದರು.

key words : GTD-family-finish-politically-Cannot-Harish Gowda