ಖಾತೆ ಹಂಚಿಕೆ: ಯಾರಿಗೂ ಅಸಮಾಧಾವಿಲ್ಲ ಎಂದ ಸಚಿವ ರಮೇಶ್ ಜಾರಕಿಹೊಳಿ….

ಹಾಸನ,ಜನವರಿ,22,2021(www.justkannada.in):  ಖಾತೆ ಹಂಚಿಕೆಯಲ್ಲಿ ಯಾರಿಗೂ ಅಸಮಾಧಾನವಿಲ್ಲ. ಅಸಮಾಧಾನವಿದ್ದರೇ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.jk

ಖಾತೆ ಹಂಚಿಕೆ ವಿಚಾರದಲ್ಲಿ ಸಚಿವರ ಅಸಮಾಧಾನ ಕುರಿತು ಹಾಸನದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಖಾತೆ ಹಂಚಿಕೆ ಖಾತೆ ಬದಲಾವಣೆ ಸಿಎಂ ಪರಮಾಧಿಕಾರ. ಸಿಎಂ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಖಾತೆ ಹಂಚಿಕೆಯಲ್ಲಿ ಯಾರಿಗೂ ಅಸಮಾಧಾನವಿಲ್ಲ ಹಾಗಿದ್ದರೇ ಸಿಎಂ ಬಿಎಸ್ ವೈ ಚರ್ಚೆ ನಡೆಸುತ್ತಾರೆ ಎಂದರು. ಇನ್ನು ನನ್ನ ಜತೆ ಯಾವ ಅಸಮಾಧಾನಿತ ಶಾಸಕರು ಚರ್ಚೆ ನಡೆಸಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ministrial-position-minister-ramesh-jarakiholi-nobody-upset
ಕೃಪೆ internet

ಸಚಿವ ಸಂಪುಟ ವಿಸ್ತರಣೆಯಾದ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ, ಹಾಲಿ ಸಚಿವರ ಖಾತೆ ಅದಲು  ಬದಲು ಮಾಡಿದ್ದರು.  ಈ ಹಿನ್ನೆಲೆಯಲ್ಲಿ ಸಚಿವರಾದ ಮಾಧುಸ್ವಾಮಿ, ಸುಧಾಕರ್, ಎಂಟಿಬಿ ನಾಗರಾಜ್ , ಗೋಪಾಲಯ್ಯ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

Key words: ministrial position- Minister -Ramesh jarakiholi -nobody – upset.