ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್  : ರೈತ ಮುಖಂಡ ಬಡಗಲಪುರ ನಾಗೇಂದ್ರ

0
246

ಮೈಸೂರು,ಜನವರಿ,22,2021(www.justkannada.in) : ಕೇಂದ್ರ ಸರ್ಕಾರದ ರೈತ ಮಸೂದೆಗಳ  ವಿರುದ್ಧ ಹೋರಾಟ ತೀವ್ರಗೊಳಿಸಲು ರೈತರು ಸಜ್ಜಾಗಿದ್ದು, ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.jkರೈತ ಪೆರೇಡ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಅವರು, ಗಣರಾಜ್ಯೋತ್ಸವದಂದು ನಡೆಯಲಿರುವ ರೈತ ಪೆರೇಡ್ ಗೆ ತೆರಳಲು ಜ.೨೨ ರಂದು ವಾಹನ ಜಾಥಾ ನಡೆಯಲಿದೆ. ಜ.೨೨ ರಂದು ಕೊಡಗು ಜಿಲ್ಲೆಯ ಕುಟ್ಟದಿಂದ ಜಾಥಾ ಹೊರಡಲಿದೆ ಎಂದರು.

ರೈತರು ಸುಮಾರು ೫ ಸಾವಿರ ವಾಹನಗಳಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬೆಂಗಳೂರಿಗೆ ತೆರಳಲಿದ್ದಾರೆ. ಬೆಂಗಳೂರಿನಲ್ಲಿ ಜ.೨೬ ರಂದು ನಡೆಯಲಿರುವ ಪೆರೇಡ್ ನಲ್ಲಿ ೨೫ ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಪೆರೇಡ್ ಗೆ ಪೂರ್ವಭಾವಿಯಾಗಿ ಜ.೨೫ ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ಈ ವೇಳೆ ಸಾರ್ವಜನಿಕರಿಗೆ ಕೇಂದ್ರ- ರಾಜ್ಯ ಸರ್ಕಾರಗಳ ಜನವಿರೋಧಿ ಮತ್ತು ರೈತ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.Republic Day-Bangalore-Farmer-Parade-peasant-leader-Badagalpur Nagendra

ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

key words : Republic Day-Bangalore-Farmer-Parade-peasant-leader-Badagalpur Nagendra