ಮನೆಯಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡ ಕೃಷಿ ಸಚಿವ ಬಿ.ಸಿ ಪಾಟೀಲ್…

Promotion

ಹಾವೇರಿ ,ಮಾರ್ಚ್,2,2021(www.justkannada.in):  ನಿನ್ನೆಯಿಂದ ಕೊರೋನಾ ಲಸಿಕೆ  ಮೂರನೇ ಹಂತ ಆರಂಭವಾಗಿದ್ದು ರಾಜಕೀಯ ನಾಯಕರು ಹಿರಿಯರೂ ಸಹ ಕೋವಿಡ್ ಲಸಿಕೆ ಪಡೆಯುತ್ತಿದ್ದಾರೆ. ಈ ಮಧ್ಯೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ತಮ್ಮ ಮನೆಗೆ ವೈದ್ಯರನ್ನ ಕರೆಸಿಕೊಂಡು ಕೋವಿಡ್ ಲಸಿಕೆ ಪಡೆದಿದ್ದಾರೆ.jk

ತಮ್ಮ ನಿವಾಸಕ್ಕೆ ವೈದ್ಯರನ್ನ ಕರೆಸಿಕೊಂಡು ಸಚಿವ ಬಿ.ಸಿ ಪಾಟೀಲ್ ಮತ್ತು ಪತ್ನಿ ವನಜಾ ಪಾಟೀಲ್ ಕೋವಿಡ್ ಲಸಿಕೆ ಪಡೆದಿದ್ದಾರೆ. ಇನ್ನು ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಲಸಿಕೆ ಪಡೆದಿರುವ ಸಚಿವ ಬಿಸಿ ಪಾಟೀಲ್ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.Minister- BC Patil – vaccinated- covid - home. 

ಈ ಹಿನ್ನೆಲೆಯಲ್ಲಿ ಈ ಬಗ್ಗೆ  ಸ್ಪಷ್ಟನೆ ನೀಡಿರುವ ಸಚಿವ ಬಿ.ಸಿ ಪಾಟೀಲ್, ಮಾರ್ಗಸೂಚಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ.ನಿನ್ನೆ ತಡವಾಗಿ ಮನೆಗೆ ಬಂದೆ. ಬೆಳಿಗ್ಗೆ ಜನರು ಮನೆ ಬಳಿ ಬಂದಿದ್ದಾರೆ. ಹೀಗಾಗಿ ಮನೆಗೆ ವೈದ್ಯರನ್ನ ಕರೆಸಿ ಲಸಿಕೆ ಹಾಕಿಸಿಕೊಂಡೆ. ಆದರೆ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ವಿಚಾರ ಗೊತ್ತಿಲ್ಲ. ವಿಚಾರ ಗೊತ್ತಿದ್ದರೇ ಆಸ್ಪತ್ರೆಗೆ ಹೋಗುತ್ತಿದ್ದೆ ಎಂದರು.

Key words: Minister- BC Patil – vaccinated- covid – home.