ಕುಣಿಯೋಕೆ ಬಾರದೆ ನೆಲ ಡೊಂಕು ಎನ್ನುವಂತಾಯ್ತು- ಸಚಿವ ಬಿ.ಸಿ ಪಾಟೀಲ್ ಹೀಗೆ ಹೇಳಿದ್ದು ಯಾಕೆ ಗೊತ್ತೆ…

 

ಕೊಪ್ಪಳ, ನವೆಂಬರ್, 20,2020(www.justkannada.in): ಇವಿಎಂ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ಶಿವರಾಜ ತಂಗಡಗಿಗೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿಸಿ ಪಾಟೀಲ್ ಕುಣಿಯೋಕೆ ಬಾರದೆ ನೆಲ ಡೊಂಕು ಎನ್ನುವಂತಾಯ್ತು  ಎಂದು ಟಾಂಗ್ ನೀಡಿದ್ದಾರೆ.kannada-journalist-media-fourth-estate-under-loss

ಬಸವಕಲ್ಯಾಣ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಿ ಗೆದ್ದು ತೋರಿಸಿ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ಶಿವರಾಜ ತಂಗಡಗಿಗೆ ಸಚಿವ ಬಿಸಿ ಪಾಟೀಲ್ ಕುಟುಕಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,  ಕಾಂಗ್ರೆಸ್ ಗೆದ್ಧ ಕ್ಷೇತ್ರದಲ್ಲಿ ಇವಿಎಂ ಬಳಕೆಯಾಗಿಲ್ವಾ..? ಇವರಿಗಾಗಿ ಚುನಾವಣಾ ವ್ಯವಸ್ಥೆ ಬದಲಿಸಲು ಆಗಲ್ಲ.  ಕುಣಿಯೋಕೆ ಬಾರದೆ ನೆಲ ಡೊಂಕು ಎನ್ನುವಂತಾಯ್ತು ಎಂದು ವ್ಯಂಗ್ಯವಾಡಿದರು.

ಶಿರಾ, ಆರ್‌ಆರ್ ನಗರ ಚುನಾವಣೆಯನ್ನೇ ಗೆದ್ದಿದ್ದೇವೆ, ಬಸವ ಕಲ್ಯಾಣ ಗೆಲ್ಲಲ್ವಾ? ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜಯ ಖಚಿತ ಎಂದು ಅವರು ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.minister-bc-patil-evm-tong-congress-leader-shivaraja-tangadagi

ಸಚಿವ ಸಂಪುಟಕ್ಕೆ ಹೊಸಬರ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ಪಾಟೀಲ್, ಹೊಸಬರಿಗೆ ಸಚಿವ ಸ್ಥಾನ ನೀಡೋದು ಸಿಎಂ ಅವರ ಪರಮಾಧಿಕಾರ. ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನ ಕೇಳಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.

Key words: Minister- BC Patil –EVM-tong –congress- leader- shivaraja tangadagi