ಕೃತಜ್ಞತಾ ಮತ್ತು ಆತ್ಮಾವಲೋಕನ ಸಭೆ: ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಮಾಜಿ ಸಂಸದ ಆರ್. ಧೃವನಾರಾಯಣ್ ಮತ್ತು ಶಾಸಕ ಯತೀಂದ್ರ ಸಿದ್ಧರಾಮಯ್ಯ..

ಮೈಸೂರು,ಆ,3,2019(www.justkannada.in): ನಾವು  ಅಭಿವೃದ್ಧಿ ಕೆಲಸಗಳೇ  ಮಾನದಂಡ ಎಂಬ ವಿಷಯದ ಮೇಲೆ ಚುನಾವಣೆ ಎದುರಿಸಿದೆವು. ಆದರೆ ಬಿಜೆಪಿ ಅವರು ಧರ್ಮ, ಜಾತಿ ಪ್ರಚೋದನೆ ಮಾಡಿ  ಚುನಾವಣೆಯಲ್ಲಿ ಗೆದ್ದಿತು. ಮುಂದೊಂದು ದಿನ ಅಭಿವೃದ್ಧಿ ಕೆಲಸಕ್ಕೆ ಮತ ನೀಡುವ  ಕಾಲ ಬರಲಿದೆ ಎಂದು ಮಾಜಿ ಸಂಸದ ಧೃವ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಮತದಾರರೊಂದಿಗೆ  ಮಾಜಿ ಸಂಸದ ಆರ್ ಧ್ರುವನಾರಾಯಣ್ ಅವರು ಕೃತಜ್ಞತಾ ಹಾಗೂ  ಆತ್ಮಾವಲೋಕನ ಸಭೆ ನಡೆಸಿದರು. ನಗರದ ಜಯಮ್ಮಾ ಗೋವಿಂದೇಗೌಡ  ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು . ಕಳೆದ ಲೋಕಸಭಾ ಚುನಾವಣೆಯಲ್ಲಿ  ಪಕ್ಷದ ಪರವಾಗಿ ದುಡಿದ ಕಾರ್ಯಕರ್ತರಿಗೆ ಮಾಜಿ ಸಂಸದ ಆರ್ ಧ್ರುವನಾರಾಯಣ್ ಅವರು ಕೃತಜ್ಞತೆ ಸಲ್ಲಿಸಿದರು.  ಕಾರ್ಯಕ್ರಮದಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ್,  ಶಾಸಕ ಯತಿಂದ್ರ ಸಿದ್ದರಾಮಯ್ಯ. ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ,  ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಮತ್ತಿತರರು ಭಾಗಿಯಾಗಿದ್ದರು.

ಸಭೆಯಲ್ಲಿ ಮಾತನಾಡಿ ಕಳೆದ  ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ  ಬೇಸರ ವ್ಯಕ್ತಪಡಿಸಿದ  ಮಾಜಿ ಸಂಸದ  ಆರ್. ಧ್ರುವನಾರಾಯಣ್.  ಕರ್ನಾಟಕದ ಇತಿಹಾಸದಲ್ಲಿ ಇದೆ ಮೊದಲ ಭಾರಿಗೆ ಕಾಂಗ್ರೆಸ್ ಗೆ  ಈ ರೀತಿಯ ಫಲಿತಂಶ ಬಂದಿದೆ. ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಂತಹ  ಉತ್ತಮ  ಕೆಲಸಗಾರರನ್ನ  ಸೋಲಿಸಲಾಯಿತು. ನಾವು  ಅಭಿವೃದ್ಧಿ ಕೆಲಸಗಳೇ  ಮಾನದಂಡ ಎಂಬ ವಿಷಯದ ಮೇಲೆ ಚುನಾವಣೆ ಎದುರಿಸಿದೆವು.  ಆದರೆ  ಬಿಜೆಪಿ ಅವರು ಧರ್ಮ, ಜಾತಿ  ಪ್ರಚೋದನೆ ಮಾಡಿ ಚುನಾವಣೆಯಲ್ಲಿ  ಗೆದ್ದಿತು. ಧರ್ಮ ಜಾತಿ  ಪ್ರಚೋದನೆಗೆ ಜನ  ಒಳಗಾದ್ರು. ನಮಗೆ ವಿಶ್ವಾಸ ಇದೆ ಮುಂದೆ ಒಂದು ದಿನ  ಅಭಿವೃದ್ಧಿ ಕೆಲಸಕ್ಕೆ ಮತ ನೀಡುವ ಕಾಲ ಬರಲಿದೆ ಎಂಬ ಆಶಾಮನೋಭಾವನೆ ಇದೆ ಎಂದರು.

ಪಕ್ಷಕ್ಕೆ  ದ್ರೋಹ ಮಾಡಿದ  ನಮ್ಮದೇ  ಪಕ್ಷದ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಒಳ್ಳೆಯ ತೀರ್ಪು ನೀಡಿದ್ದಾರೆ.. ಇದು  ಇನ್ನುಳಿದವರಿಗೂ ಪಾಠ ಆಗಲಿದೆ.ಮುಂದಿನ  ದಿನಗಳಲ್ಲಿ  ಗ್ರಾಮ ಮಂಚಾಯ್ತ್ನಿ ಚುನಾವಣೆಯಿಂದ ಎಲ್ಲಾ  ಚುನಾವಣೆಗಳನ್ನ  ಒಗ್ಗಟ್ಟಾಗಿ ಎದುರಿಸೋಣ ಎಂದು ಕಾರ್ಯಕರ್ತರಿಗೆ ಮಾಜಿ ಸಂಸದ ಆರ್. ಧ್ರುವನಾರಾಯಣ್ ಕಿವಿ ಮಾತು ಹೇಳಿದರು.

ನಂಬರ್ 1 ಸಂಸದರನ್ನ  ನಾವು ಕಳೆದುಕೊಂಡಿದ್ದೇವೆ- ಶಾಸಕ ಯತೀಂದ್ರ ಸಿದ್ಧರಾಮಯ್ಯ…

ಇದೇ ವೇಳೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ನಾವು ನಂಬರ್ 1 ಸಂಸದರನ್ನ  ನಾವು ಕಳೆದುಕೊಂಡಿದ್ದೇವೆ. ಧ್ರುವನಾರಾಯಣ್ ಸೋಲಿಗೆ ಸಾಕಷ್ಟು  ಕಾರಣಗಳಿವೆ. ಬಿಜೆಪಿ ಅಭ್ಯರ್ಥಿ ಇದು ನನ್ನ ಕೊನೆಯ ಚುನಾವಣೆ ಎಂದು ಬಿಂಬಿಸಿದ್ದರು. ಬಿಎಸ್ಪಿ ಪಕ್ಷದ ಒಳ ರಾಜಕಾರಣ ಹಾಗೂ ನಮ್ಮ ಪಕ್ಷದ ಕೆಲವು ನಾಯಕರ ಆಂತರಿಕ ಬಿನ್ನಾಭಿಪ್ರಾಯಗಳಿಂದಲೇ  ಉತ್ತಮ ಸಂಸದೀಯ ಪಟು ಧ್ರುವನಾರಾಯಣ್ ಸೋಲಿಗೆ ಕಾರಣವಾಯಿತು ಎಂದು ಆರೋಪಿಸಿದರು.

ಧ್ರುವ ನಾರಾಯಣ್ ಅವರ  ಆಡಳಿತ ಶೈಲಿ ಹಾಗೂ  ಕಾರ್ಯ ವೈಖರಿ ನೋಡಿದ್ರೆ ಯಾರೊಬ್ಬರೂ ಸೋಲುತ್ತಾರೆ ಎಂದು ಭಾವಿಸಿರಲಿಲ್ಲ.. ಬಿಎಸ್ಪಿ ಪಕ್ಷವು ನಿಜವಾಗಿಯು  ಅಂಬೇಡ್ಕರ್ ಅವರ  ತತ್ವ ಪಾಲಿಸಿದ್ರಾ….? ಕೋಮುವಾದದ  ವಿರುದ್ಧ  ಹೋರಾಟ ಮಾಡೋದು ಬಿಟ್ಟು ಬಿಜೆಪಿಗೆ ಬಿಎಸ್ಪಿ  ಬೆಂಬಲ ನೀಡಿದೆ. ಬಿಎಸ್ಪಿ ಶಾಸಕ ಸದನಕ್ಕೆ  ಆಗಮಿಸದೇ ಕೋಮುವಾದಿ ಪಕ್ಷ ಬಿಜೆಪಿಗೆ  ಬೆಂಬಲಿಸಿದ್ದಾರೆ .ಈ ಮೂಲಕ ಅಂಬೇಡ್ಕರ್ ತತ್ವ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮುಂದೆ ಎಂದೇ  ಚುನಾವಣೆ  ನಡೆದ್ರು ಧ್ರುವನಾರಾಯಣ್ ಅವರನ್ನ ಬೆಂಬಲಿಸೋಣ ಎಂದು  ಕ್ಷೇತ್ರದ  ಜನತೆಗೆ ಶಾಸಕ ಯತೀಂದ್ರ  ಸಿದ್ದರಾಮಯ್ಯ ಕಿವಿ ಮಾತು ಹೇಳಿದರು.

Key words:  meeting –introspection-Former MP -R Dhruvanarayan – MLA -Yatindra Siddaramaiah