Thursday, August 13, 2026

BDA Apartments

Home Front Page ಕಲುಷಿತ ಆಹಾರ ಪೂರೈಕೆ ಹಿನ್ನಲೆ: 1.10 ಲಕ್ಷ ರೂ. ಪರಿಹಾರ ನಿಡುವಂತೆ ಸರವಣ ಭವನ ರೆಸ್ಟೋರೆಂಟ್...

ಕಲುಷಿತ ಆಹಾರ ಪೂರೈಕೆ ಹಿನ್ನಲೆ: 1.10 ಲಕ್ಷ ರೂ. ಪರಿಹಾರ ನಿಡುವಂತೆ ಸರವಣ ಭವನ ರೆಸ್ಟೋರೆಂಟ್ ಗೆ ಗ್ರಾಹಕರ ನ್ಯಾಯಾಲಯ ಆದೇಶ

ಚೆನ್ನೈ:ಆ-3:(www.justkannada.in) ಗ್ರಾಹಕರೊಬ್ಬರಿಗೆ ಕಲುಷಿತ ಆಹಾರ ಪೂರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರವಣ ಭವನ ರೆಸ್ಟೋರೆಂಟ್ ಗೆ 1.10 ಲಕ್ಷ ರೂ. ಪರಿಹಾರ ನೀಡುವಂತೆ ತಮಿಳುನಾಡಿನ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್‌ ವಕೀಲ ಎಸ್‌.ಕೆ. ಸ್ವಾಮಿ ಅವರು 2014ರ ಅಕ್ಟೋಬರ್‌ನಲ್ಲಿ ಚೆನ್ನೈನ ಅಣ್ಣಾಸಲೈನಲ್ಲಿರುವ ಸರವಣ ಭವನದಲ್ಲಿ ಆಹಾರ ಸೇವಿಸಿದ್ದರು. ಆಹಾರದಲ್ಲಿ ಕೂದಲು ಇರುವುದನ್ನು ಕಂಡು ಅವರು ಹೋಟೆಲ್‌ ವ್ಯವಸ್ಥಾಪಕರ ವಿರುದ್ಧ ಕಿಡಿಕಾರಿದ್ದರು. ಪ್ರಮಾದಕ್ಕೆ ವ್ಯವಸ್ಥಾಪಕರು ಕ್ಷಮೆಯಾಚಿಸಿ ತಕ್ಷಣವೇ ಬೇರೆ ಆಹಾರ ಪೂರೈಸಿದ್ದರು.

ಆದರೆ ಇದನ್ನು ಸೇವಿಸಿದ ಕೆಲವೇ ಹೊತ್ತಿನಲ್ಲಿಯೇ ಸ್ವಾಮಿ ಅವರಿಗೆ ಹೊಟ್ಟೆನೋವು, ವಾಂತಿ ಹಾಗೂ ತಲೆಸುತ್ತು, ಜ್ವರ ಹಾಗೂ ತುರಿಕೆ ಕಾಣಸಿಕೊಂಡಿತ್ತು. ತೀವ್ರ ಅಸ್ವಸ್ಥಗೊಂಡ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆದ ಸ್ವಾಮಿ, ನಂತರ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವ್ಯಾಜ್ಯದ ವೆಚ್ಚವಾಗಿ 10 ಸಾವಿರ ರೂ. ಹಾಗೂ ಚಿಕಿತ್ಸೆ ವೆಚ್ಚ, ಪರಿಹಾರವಾಗಿ ಒಂದು ಲಕ್ಷ ರೂ. ಪಾವತಿಸುವಂತೆ ನ್ಯಾಯಾಲಯ ಸರವಣ ಭವನಕ್ಕೆ ಆದೇಶ ನೀಡಿದೆ.

ಕಲುಷಿತ ಆಹಾರ ಪೂರೈಕೆ ಹಿನ್ನಲೆ: 1.10 ಲಕ್ಷ ರೂ. ಪರಿಹಾರ ನಿಡುವಂತೆ ಸರವಣ ಭವನ ರೆಸ್ಟೋರೆಂಟ್ ಗೆ ಗ್ರಾಹಕರ ನ್ಯಾಯಾಲಯ ಆದೇಶ
Saravana Bhavan Told To Pay Rs. 1.10 Lakh To Man For Deficiency In Service