ಮಾಜಿ ಶಾಸಕ ಮತ್ತು ಬೆಂಬಲಿಗರಿಂದ ಗೂಂಡಾಗಿರಿ: ಮೂಕ ಪ್ರೇಕ್ಷಕರಾದ ಪೊಲೀಸರು…

Promotion

ಮಂಡ್ಯ,ಜು,9,2020(www.justkannada.in): ಬಸ್ ಸ್ಟ್ಯಾಂಡ್ ತೆರವು ಕಾರ್ಯಾಚರಣೆ ವೇಳೆ ಜೆಸಿಬಿ ಚಾಲಕನ ಮೇಲೆ ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ಮತ್ತು ಬೆಂಬಲಿಗರು ಹಲ್ಲೆ ಮಾಡಿರುವ ಘಟನೆ ನಡೆದಿದೆ.jk-logo-justkannada-logo

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಮತಿ ಪಡೆದು ಗ್ರಾಮದಲ್ಲಿ ಬಸ್ ಸ್ಟ್ಯಾಂಡ್ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಯಾಚರಣೆಗೆ ತಹಸೀಲ್ದಾರ್ ಸೇರಿ ಮೇಲಧಿಕಾರಿಗಳು ಅನುಮತಿ ನೀಡಿದ್ದರು.  ತಾಲ್ಲೂಕು ಪಂಚಾಯಿತಿ ಇಓ ಅನುಮತಿ ಪಡೆದು PWD ಜಾಗದ ಬಸ್ ಸ್ಟ್ಯಾಂಡ್ ಅನ್ನ ತೆರೆವುಗೊಳಿಸಲಾಗುತ್ತಿತ್ತು.

ಈ ವೇಳೆ ಸ್ಥಳಕ್ಕೆ ಬಂದ ಮಾಜಿ ಶಾಸಕ ರಮೇಶ್ ಬಂಡಿಸಿದ್ಧೇಗೌಡ ಮತ್ತು ಅವರ ಬೆಂಬಲಿಗರು ಕಾರ್ಯಾಚರಣೆಗೆ ಅಡ್ಡಿಪಡಿಸಿ ಜೆಸಿಬಿ ಚಾಲಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಕಲ್ಲೇಟಿನಿಂದ ಬಚಾವಾಗಲು ಚಾಲಕ ಯತ್ನಿಸಿದ್ದು ಚಾಲಕನನ್ನ ಹಿಡಿದು ರಮೇಶ್ ಬಂಡಿಸಿದ್ಧೇಗೌಡ ಮತ್ತು ಬೆಂಬಲಿಗರು ಥಳಿಸಿ ಗೂಂಡಾಗಿರಿ ನಡೆಸಿದ್ದಾರೆ.mandya-former  MLA- supporter-assult- JCB –Driver-police

ಈ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮಾಜಿ ಶಾಸಕ ರಮೇಶ್ ಬಂಡಿಸಿದ್ಧೇಗೌಡರು ಮತ್ತು ಬೆಂಬಲಿಗರ ವರ್ತನೆ ಕಂಡು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.

Key words: mandya-former  MLA- supporter-assult- JCB –Driver-police