ಸಿಂಪಲ್ಲಾಗಾಯ್ತು ಮಲಾಲಾ ಯೂಸುಫ್ ನಿಕ್ಕಾ ..!

Promotion

 

ಮೈಸೂರು, ನ.11, 2021 : (www.justkannada.in news) : ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೇ ಮಂಗಳವಾರ ಅಸ್ಸರ್ ಜತೆಗೆ ಮಲಾಲಾ ಮದುವೆಯಾಗಿದ್ದಾರೆ. ಈ ಸಂಬಂಧ ಖುದ್ದು ಮಲಾಲಾ ಅವರೇ ಟ್ವೀಟರ್ ಮೂಲಕ ಫೋಟೋಗಳನ್ನು ಹಂಚಿಕೊಂಡಿದ್ದು, ವಿವರ ಹೀಗಿದೆ..

“ಇಂದು ನನ್ನ ಜೀವನ ಅಮೂಲ್ಯ ದಿನ. ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್‌ ಹ್ಯಾಮ್‌ನ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭ ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ, ಮುಂದಿನ ಪ್ರಯಾಣದಲ್ಲಿ ನಾವು ಒಟ್ಟಿಗೆ ನಡೆಯಲು ಬಯಸಿದ್ದೇವೆ’ ಎಂದು ಟ್ವೀಟ್ ಮೂಲಕ ಹೇಳಿ, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

key words : malala-yousuf-nikha-pakisthan-Nobel-winner