ಎರಡು ಪ್ರತ್ಯೇಕ ಅಪಘಾತ : ಮಾಜಿ ಸೈನಿಕ , ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕ ಮೃತ.

Promotion

 

ಮಡಿಕೇರಿ, ಸೆ.15, 2019 : (www.justkannada.in news ) ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮಾಜಿ ಸೈನಿಕ ಸೇರಿದಂತೆ ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಯುವಕ ಸಾವನ್ನಪ್ಪಿರೋ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮದುವೆಗೆ ಬಂದಿದ್ದ ಕೊಳ್ತೋಡು ಗ್ರಾಮದ ಮಾಜಿ ಸೈನಿಕ ಎಂ ಸಿ ಪೊನ್ನಪ್ಪ (56) ಸಾವನ್ನಪ್ಪಿದರು. ಮತ್ತೊಂದು ಪ್ರಕರಣದಲ್ಲಿ ಗಣಪತಿ ವಿಸರ್ಜನೆಗೆಂದು ತೆರಳುತ್ತಿದ್ದ ಮೈತಾಡಿ ಗ್ರಾಮದ ಕವನ್ (20)
ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ನಡೆದಿದೆ. ಆತನ ಸ್ನೇಹಿತನಿಗೆ ಗಂಭೀರ ಗಾಯವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌.

ಈ ಪ್ರಕರಣಗಳ ಸಂಬಂಧ ವಿರಾಜಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ‌.

 

key words : madikeri-road-accident-two-dead-police