ಪ್ರತಿಪಕ್ಷ ನಾಯಕರ ಆಯ್ಕೆಗೆ ಬೆಂಗಳೂರಲ್ಲಿ ಮಧುಸೂಧನ್ ಮಿಸ್ತ್ರಿ ಮೀಟಿಂಗ್

Promotion

ಬೆಂಗಳೂರು, ಅಕ್ಟೋಬರ್ 06, 2019 (www.justkannada.in): ಪ್ರತಿಪಕ್ಷ ನಾಯಕರ ಆಯ್ಕೆ ಸಂಬಂಧ ಇಂದು ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ.

ಕಾಂಗ್ರೆಸ್ ನ ಮಧುಸೂಧನ್ ಮಿಸ್ತ್ರಿ ನಗರದ ಖಾಸಗೀ ಹೋಟೆಲ್ ನಲ್ಲಿ ಒನ್ ಟು ಒನ್ ಮೀಟಿಂಗ್ ನಡೆಸುತ್ತಿದ್ದು, ಒಬ್ಬೊಬ್ಬ ಕೈ ನಾಯಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ನಗರದ ಖಾಸಗೀ ಹೋಟೆಲ್ ನಲ್ಲಿ ಪ್ರತಿಪಕ್ಷ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಕುರಿತು ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಸುಮಾರು 60ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ಸಭೆಯನ್ನು ಕರೆದಿರುವ ಮಧುಸೂಧನ್ ಮಿಸ್ತ್ರಿ, ಒನ್ ಟು ಒನ್ ಮೀಟಿಂಗ್ ನಡೆಸುತ್ತಿದ್ದಾರೆ.