ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಪರೆಂಪರೆಯಿರುವುದು ಹೆಮ್ಮೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಡಿಸೆಂಬರ್,12,2020(www.justkannada.in) : ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಒಂದು ಪರೆಂಪರೆಯಿರುವುದು ಹೆಮ್ಮೆ ಪಡುವಂತಹ ವಿಷಯ. ವಿವಿಯ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳ ಸಂಘವು ಕೈಗೊಳ್ಳುವ ಎಲ್ಲ ಕಾರ್ಯಕ್ಕೆ ವಿವಿಯ ಬೆಂಬಲವಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.Long-live-Mysore-Vivi-Proud-history-heritage-Chancellor-Prof.G.Hemant Kumar

ಒಂದು ಮನೆ, ಸಂಸ್ಥೆ, ವಿವಿಯಾಗಲೀ ಅಲ್ಲಿ ಹಿರಿಯರು ಇದ್ದರೇ ಭೂಷಣ. ಹಿರಿಯರು ಎಂದರೆ ಅನುಭವ, ಅನುಭವಕ್ಕೆ ಸಮನಾವಾದದ್ದೂ ಯಾವುದೂ ಇಲ್ಲ. ಅದನ್ನ ಗಳಿಸಿಕೊಳ್ಳುವುದು ಬಹಳ ಮುಖ್ಯ. ಪರಂಪರೆ ಇಲ್ಲದ ವಿದ್ಯಾಸಂಸ್ಥೆ ಯಾವ ಆದರ್ಶವನ್ನು ಬಿತ್ತಲಾರದು ಎಂದರು.

ನೂರ ನಾಲ್ಕು ವರ್ಷ ಸುದೀರ್ಘ ಇತಿಹಾಸವಿರುವ ವಿವಿಯಲ್ಲಿ ಕಲಿತವರ ಲೆಕ್ಕವಿಟ್ಟಿದ್ದರೆ ದಶಲಕ್ಷಗಳ ದಾಟಿ ಕೋಟಿ ತಲುಪ್ಪುತ್ತಿತ್ತೇನೋ, ವಿವಿಯ ಸರ್ವಾಂಗೀಣ ಬೆಳವಣಿಗೆಗೆ ಕಾಮಧೇನು, ಕಲ್ಪವೃಕ್ಷವಾಗಬಹುದಾಗಿದ್ದ ಹಿರಿಯ ವಿದ್ಯಾರ್ಥಿಗಳ ಸಂಘವು ತಡವಾಗಿ ಅಸ್ತಿತ್ವಕ್ಕೆ ಬಂತು. ಜಗತ್ತಿನ ದೊಡ್ಡ ವಿವಿಗಳ ಏಳಿಗೆಗೆ ಹಿರಿಯ ವಿದ್ಯಾರ್ಥಿಗಳ ಪಾತ್ರ ಪ್ರಧಾನವಾಗಿದೆ ಎಂದು ಹೇಳಿದರು.

ಇದ್ದುದನ್ನು ಹಂಚಿ ತಿನ್ನುವುದು ನಮ್ಮ ರಕ್ತದಲ್ಲಿಯೇ ಬಂದಿದೆ. ಆ ದೃಷ್ಟಿಯಿಂದ ಹೇಳುವಾಗ ಹಿರಿಯ ವಿದ್ಯಾರ್ಥಿಗಳ ಸಂಘ ಅಸಾಧ್ಯವಾಗಿ ತೋರುವ ಹಲವು ಸಾಧನೆಗಳನ್ನು ಮಾಡಬಹುದಾಗಿದೆ.  ಕೊರೊನಾದಿಂದಾಗಿ ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ. ಆದರೆ, ಪರಿಸ್ಥಿತಿ ತಿಳಿಯಾದ ಮೇಲೆ ಒಂದೊಂದಾಗಿ ಉದ್ದೇಶಿತ ಕಾರ್ಯಕ್ರಮಗಳನ್ನು ನೆರವೇರಿಸಬೇಕು ಎಂದು ಮನವಿ ಮಾಡಿದರು.

ಒಂದು ಸುವರ್ಣ ಸೇತುವೆಯಾಗಿ ಹಿರಿಯ ವಿದ್ಯಾರ್ಥಿಗಳ ಸಂಘ ಕ್ರೀಯಾಶೀಲವಾಗಿರಬೇಕೆಂದು ನಂಬಿದ್ದೇನೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 8 ಮಂದಿಯನ್ನು ಗುರುತಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ವಿವಿಯ ಅಭಿವೃದ್ಧಿಗೆ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಅವರ ಚಿಂತನದ್ರವ್ಯ ಮಹತ್ವದ್ದಾಗಿದೆ ಎಂದು ತಿಳಿಸಿದರು.

English summary…..

It is a pride that MU has rich history and legacy: MU VC
Mysuru, Dec. 12, 2020 (www.justkannada.in): “It is indeed a matter of pride that the Mysore University has a rich and long history and a legacy. The university supports all the activities of the senior students association for the development of the university,” opined Prof. G. Hemanth Kumar, Vice-Chancellor, Mysore University.Long-live-Mysore-Vivi-Proud-history-heritage-Chancellor-Prof.G.Hemant Kumar
Speaking at the achievers’ felicitation programme he said, “the Mysore University has a 104-year-long history. If we had actual figures of all those who have learned here perhaps it would cross 10 million. The Senior Students Association which could have helped a lot for the development of the university came into existence very lately. The contribution of alumnus in the development of many reputed universities across the world is laudable,” he added.Long-live-Mysore-Vivi-Proud-history-heritage-Chancellor-Prof.G.Hemant Kumar
Keywords: Mysore University/ Prof. G. Hemanth Kumar/ legacy/ Senior Students association

key words : Long-live-Mysore-Vivi-Proud-history-heritage-Chancellor-Prof.G.Hemant Kumar