ಲಾಕ್ ಡೌನ್: ಒಂದುವರೆ ಗಂಟೆಯಲ್ಲಿ 50ಕ್ಕೂ ಹೆಚ್ಚು ವಾಹನಗಳನ್ನ ಜಪ್ತಿ ಮಾಡಿದ ಪೊಲೀಸರು…

ಬೆಂಗಳೂರು,ಮೇ,22,2021(www.justkannada.in):  ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿರುವ ಹಿನ್ನೆಲೆ ಮೇ 24ರವರೆಗೆ ಜಾರಿಯಲ್ಲಿರುವ ಲಾಕ್ ಡೌನ್ ಅನ್ನ ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.jk

ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಪೊಲೀಸರು ಬ್ಯಾರಿಕೇಡ್ ಹಾಕಿ ಕಾರ್ಯಾಚರಣೆ ಮುಂದುವರೆಸಿದ್ದು ಅನಗತ್ಯವಾಗಿ ಓಡಾಡುವವರ ವಾಹನಗಳನ್ನ ಜಪ್ತಿ ಮಾಡುತ್ತಿದ್ದಾರೆ. 10 ಗಂಟೆಯ ನಂತರ ಯಾರು ಸಹ ಓಡಾಡಬಾರದು. ಆದರೆ ಅನಗತ್ಯವಾಗಿ ರೋಡಿಗಿಳಿದವರಿಗೆ ಪೊಲೀಸರು ಬಿಸಿಮುಟ್ಟಿಸುತ್ತಿದ್ದಾರೆ.

ಈ ಮಧ್ಯೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್  ನಲ್ಲಿ ಪೊಲೀಸರು ಒಂದುವರೆ ಗಂಟೆಯಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ಕಾರು ಬೈಕ್, ಆಟೋಗಳನ್ನ ಜಪ್ತಿ ಮಾಡಿರುವುದಲ್ಲದೇ ವಾಹನ ಸವಾರರನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.lockdown-bangalore-police-more-than-50-vehicles-sieze

ಹಾಗೆಯೇ ಕೆ.ಆರ್ ಪುರಂನ ಟಿನ್ ಫ್ಯಾಕ್ಟರಿ ಬಳಿ 15ಕ್ಕೂ ಹೆಚ್ಚು ವಾಹನಗಳು, ಹುಣಸೆಮಾರನಹಳ್ಳಿಯಲ್ಲಿ 10ಕ್ಕೂ ಹೆಚ್ಚು ವಾಹನಗಳು ಮತ್ತು ಅದರ ಚಾಲಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: Lockdown-bangalore- Police – more than- 50 vehicles -sieze