ಮಂಗಳೂರು ವಿವಿಯ ಎಂಎಲ್‌ ಐಎಸ್  ಕೋರ್ಸ್ ಗೆ ಅರ್ಜಿ ಸಲ್ಲಿಸಲು ನ.21 ರಂದು ಕೊನೇ ದಿನ..

ಮಂಗಳೂರು,ನವೆಂಬರ್,9,2020(www.justkannada.in): ಮಂಗಳೂರು ವಿಶ್ವ ವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎರಡು ವರ್ಷದ ಮಾಸ್ಟರ್ ಆಫ್ ಲೈಬ್ರೆರಿ ಆಂಡ್ ಇನ್‌ಫಾರ್ಮೇಶನ್ ಸೈನ್ಸ್ (ಎಂಎಲ್‌ಐಎಸ್) ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ನವೆಂಬರ್ 21 ಕಡೆಯ ದಿನಾಂಕವಾಗಿದೆ.kannada-journalist-media-fourth-estate-under-loss

ಈ ಕುರಿತು ಮಾಹಿತಿ ನೀಡಿರುವ ವಿಭಾಗದ ಅಧ್ಯಕ್ಷ ಪ್ರೊಫೆಸರ್ ಡಾ.ಡಿ.ಶಿವಲಿಂಗಯ್ಯ, ಕೋರ್ಸ್ ಗೆ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳು ನ.21 ರೊಳಗೆ ಅರ್ಜಿ ಸಲ್ಲಿಸಬೇಕು. ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಮತ್ತು ಪದವಿಯ ಅಂತಿಮ ವರ್ಷದ ತಾಂಶ ನಿರೀಕ್ಷೆಯಲ್ಲಿರುವವರು ಅರ್ಜಿ ಸಲ್ಲಿಸಬಹುದು. 38 ಸೀಟ್‌ಗಳು ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು  ಎಂದು ತಿಳಿಸಿದರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಸುಸಜ್ಜಿತವಾದ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ವೈಜ್ಞೆ ಮತ್ತು ಅಂತರ್ಜಾಲದ ಸೌಲಭ್ಯ ಇದೆ. ಇದೊಂದು ವೃತ್ತಿಪರ ಕೋರ್ಸ್‌ ಆಗಿದ್ದು, ಗರಿಷ್ಠ ಪ್ರಮಾಣದ ಉದ್ಯೋಗವಕಾಶಗಳು ಇವೆ ಎಂದು ತಿಳಿಸಿದರು.

ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗವು ಪ್ರಾರಂಭದಲ್ಲಿ 1982ರಿಂದ1996ರವರೆಗೆ ಒಂದು ವರ್ಷದ ಬಿಎಐಎಸ್‌ಸಿ ಕೋಸ್‌ನ್ನು ಮತ್ತು 1990ರಿಂದ 1997ರವರೆಗೆ ಒಂದು ವರ್ಷದ ಸ್ನಾತಕೋತ್ತರೆ ಎಲ್‌ಐಎಸ್‌ಸಿ ಕೋರ್ಸ ನ್ನು ಹಾಗೂ 1996 ರಿಂದ ಎರಡು ವರ್ಷದ ಸ್ನಾತಕೋತ್ತರ ಎಎಲ್‌ಎಚ್‌ಪಿ ಕೋರ್ಸನ್ನು ಮತ್ತು ಪಿಎಚ್‌ಡಿ ಕೋರ್ಸನ್ನು ಪ್ರಾರಂಭಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಈ ಕೋರ್ಸ್ ಪಡೆದು ಉನ್ನತ ಮಟ್ಟಕ್ಕೆ ಏರಿದ್ದಾರೆ. ಈ ಕೋರ್ಸ್ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು  ಹೇಳಿದರು.last-date-applying-mlis-course-mangalore-university

ಕೋರ್ಸ್ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ www.mangaloreuniversity.ac.in ಅಥವಾ ವಿಭಾಗದ ದೂರವಾಣಿ ಸಂಖ್ಯೆ 08:24 9448358314, 6366274222 ಸಂಖ್ಯೆಯನ್ನು ಸುಪರ್ಕಿಸಬಹುದು ಎಂದು ಡಾ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

Key words: Last date – applying – MLIS- Course – Mangalore university