ಕಾರ್ಮಿಕರ ಮುಷ್ಕರ ಹಿನ್ನೆಲೆ: ಕರ್ತವ್ಯಕ್ಕೆ ಗೈರಾದವರ ವಿರುದ್ದ ಶಿಸ್ತುಕ್ರಮ -ಕೆಎಸ್ ಆರ್ ಟಿಸಿ ಎಂಡಿ ಶೀವಯೋಗಿ ಕಳಸದ ಹೇಳಿಕೆ…

kannada t-shirts

ಬೆಂಗಳೂರು,ಜ,8,2020(www.justkannada.in):   ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ಇಂದು ಕಾರ್ಮಿಕರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ, ಕರ್ತವ್ಯಕ್ಕೆ ಗೈರಾಗಿರುವ ಕೆಎಸ್ ಆರ್ ಟಿಸಿ ಸಿಬ್ಬಂದಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಕಾರ್ಮಿಕರ ಮುಷ್ಕರ ಕುರಿತು ಮಾತನಾಡಿದ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ,  ಕೆಲಸಕ್ಕೆ ಗೈರಾದವರ ಬಗ್ಗೆ ಸಂಜೆಯೊಳಗೆ ಮಾಹಿತಿ ಸಂಗ್ರಹಿಸುತ್ತೇವೆ. ನಂತರ ಕರ್ತವ್ಯಕ್ಕೆ ಗೈರಾದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇನ್ನು ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬಸ್ ಸಂಚಾರ ಎಂದಿನಂತೆ ಇದೆ. ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಶಿವಯೋಗಿ ಕಳಸದ ತಿಳಿಸಿದರು.

Key words: labor strike-Punishment -against –duty-KSR TC MD –Shivayogi kalasad

website developers in mysore