ಬೆಳಗಾವಿ-ಮಹಾರಾಷ್ಟ್ರ ನಡುವೆ ಮತ್ತೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭ.

Promotion

ಬೆಳಗಾವಿ,ಡಿಸೆಂಬರ್,9,2022(www.justkannada.in):  ಗಡಿವಿವಾದ ತಾರಕಕ್ಕೇರಿದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವಿನ  ಕೆಎಸ್ ಆರ್ ಟಿಸಿ ಬಸ್ ಸಂಚಾರ ಇದೀಗ ಮತ್ತೆ ಆರಂಭವಾಗಿದೆ.

ಬೆಳಗಾವಿ-ಮಹಾರಾಷ್ಟ್ರ  ನಡುವೆ ಎಂದಿನಂತೆ ಕೆಎಸ್ ಆರ್ ಟಿಸಿ ಬಸ್ ಸಂಚಾರ  ಆರಂಭವಾಗಿದೆ. ಬೆಳಗಾವಿಯಿಂದ 400ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು,  ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ಬಸ್ ಆಗಮಿಸುತ್ತಿವೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿವಿವಾದದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾರಾಷ್ಟ್ರದ  ಕೆಲ ಕಿಡಿಗೇಡಿ ಪುಂಡರು ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ಮಸಿ ಬಳಿದು ಉದ್ಧಟತನ ತೋರಿದ್ದರು.

Key words: KSRTC bus –started- again- between- Belgaum -Maharashtra.