ತೆರಿಗೆ ಕಟ್ಟದೆ ವಂಚನೆ ಆರೋಪ: ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ.

ಬೆಂಗಳೂರು,ಡಿಸೆಂಬರ್,9,2022(www.justkannada.in): ತೆರಿಗೆ ಕಟ್ಟದೆ ವಂಚನೆ ಮಾಡುತ್ತಿರುವ ಆರೋಪದ ಮೇಲೆ  ಬೆಂಗಳೂರು ಸೇರಿ ಹಲವೆಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಸರ್ಕಾರಕ್ಕೆ ತೆರಿಗೆ ಕಟ್ಟದೆ ವಂಚನೆ ಮಾಡಿದ ಆರೋಪದ ಮೇಲೆ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ ನಡೆಸಿದೆ.  ಬೆಂಗಳೂರಿನ ಸಂಜಯನಗರ, ಹೆಬ್ಬಾಳ, ಚಿಕ್ಕಬಳ್ಳಾಪುರ ರಾಮನಗರ, ಬಿಡದಿಯಲ್ಲಿ ಉದ್ಯಮಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Key words: IT attack – many places -including -Bangalore.