ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಮುಕ್ತವಿವಿ ನಡೆ…?

ಮೈಸೂರು,ಅಕ್ಟೋಬರ್,5,2021(www.justkannada.in): ವಿವಿಗಳಲ್ಲಿ ತಾತ್ಕಾಲಿಕ ಕೆಲಸನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ ಆದೇಶ ಹೊರಡಿಸಿತ್ತು. ಈ ಮಧ್ಯೆ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ಹೊರಡಿಸಿರುವ ಸುತ್ತೋಲೆಯೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಹೌದು, ತಾತ್ಕಾಲಿಕ ಕೆಲಸನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವಂತೆ ಸರ್ಕಾರ ಎಲ್ಲಾ ವಿವಿಗಳಿಗೆ ಆದೇಶಿಸಿದ ಬೆನ್ನಲ್ಲೆ ಮುಕ್ತ ವಿವಿಯು,  10 ವರ್ಷಗಳಿಂದ  ಸೇವೆ ಸಲ್ಲಿಸಿರುವ ಕಾಲಿಕ ವೇತನ ಶ್ರೇಣಿ/ ತಾತ್ಕಾಲಿಕ ನೌಕರರನ್ನ ಖಾಯಂ ಮಾಡುವುದಾಗಿ ಹೇಳಿ ತಮ್ಮ ಮಾಹಿತಿ ನೀಡುವಂತೆ ಸುತ್ತೋಲೆ ಹೊರಡಿಸಿದೆ.

ಸೇವೆ ಖಾಯಂಮಾತಿಗಾಗಿ ಅಗತ್ಯ ಮಾಹಿತಿ ಅಥವಾ ದಾಖಲೆಯನ್ನ ಕ್ರೂಢೀಕರಿಸಿ  ದಾಖಲೆಗಳ ಸ್ವಯಂ ಧೃಡಿಕೃತ  ಪ್ರತಿಗಳನ್ನ  ವಿಭಾಗ ಕಚೇರಿ ಮುಖ್ಯಸ್ಥರ ಮುಖಾಂತರ  ಅಕ್ಟೋಬರ್ 8 ರೊಳಗೆ ಉಪಕುಲಸಚಿವ(ಸಾಮಾನ್ಯ) ಇವರಿಗೆ ತುರ್ತಾಗಿ ಸಲ್ಲಿಸುವಂತೆ ಕಾಲಿಕ ವೇತನ/ ತಾತ್ಕಾಲಿಕ ಶ್ರೇಣಿ ನೌಕರಿಗೆ ಸೂಚಿಸಿ ಮುಕ್ತವಿವಿ ಸುತ್ತೋಲೆ ಹೊರಡಿಸಿದೆ.

ಈ ಮಧ್ಯೆ ಸರ್ಕಾರ ತಾತ್ಕಾಲಿಕ ಸಿಬ್ಬಂದಿಗಳನ್ನ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದರೂ ಆ ಆದೇಶಕ್ಕೆ  ವಿರುದ್ಧವಾಗಿ ಮುಕ್ತ ವಿವಿ ಸುತ್ತೋಲೆ ಹೊರಡಿಸಿರುವ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Key words: KSOU-against -government –order- Temporary