ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ನಾಪತ್ತೆ ಪ್ರಕರಣ: ಒಬ್ಬರ ಮೃತದೇಹ ಪತ್ತೆ…

ಕೊಡಗು,ಆ,8,2020(www,justkannada.in):  ಭಾರಿ ಮಳೆಯಿಂದಾಗಿ ಕೊಡಗಿನಲ್ಲಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಅರ್ಚಕರ ಕುಟುಂಬದ ನಾಲ್ವರಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ.jk-logo-justkannada-logo

ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸಿ  ಒಂದು ಮೃತದೇಹ ಪತ್ತೆಮಾಡಿದ್ದು ಮೃದದೇಹ ಅರ್ಚಕರಾದ ನಾರಾಯಣ ಆಚಾರ್ ಅವರ ಅಣ್ಣ ಅನಂತ ತೀರ್ಥ ಅವರದ್ದು ಎನ್ನಲಾಗಿದೆ. ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಳೆದ ಮೂರು ದಿನಗಳ ಹಿಂದೆ ಮನೆಗಳ ಮೇಲೆ ಬ್ರಹ್ಮಗಿರಿ ಗುಡ್ಡ ಕುಸಿದಿತ್ತು.

ಈ ವೇಳೆ ತಲಕಾವೇರಿ ಅರ್ಚಕ ನಾರಾಯಣ ಆಚಾರ್ ಅವರ ಮನೆ ಮೇಲೂ ಗುಡ್ಡ ಕುಸಿದು ನಾರಾಯಣ್ ಅಚಾರ್ ಸೇರಿ ಐವರು ನಾಪತ್ತೆಯಾಗಿದ್ದರು.  ನಾಪತ್ತೆಯಾಗಿರುವ ಐವರನ್ನ ಪತ್ತೆಮಾಡಲು ಎನ್ ಡಿಆರ್ ಎಫ್ ತಂಡ ಕಾರ್ಯಚರಣೆಗಿಳಿದಿತ್ತು. ಆದರೆ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಈ ನಡುವೆ ಇಂದು ಕಾರ್ಯಾಚರಣೆ ಶುರುಮಾಡಿದ ಎನ್ ಡಿಆರ್ ಎಫ್ ಒಬ್ಬರ ಶವ ಪತ್ತೆ ಮಾಡಿದೆ. ಉಳಿದ ನಾಲ್ವರ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದೆ.kodagu-brahmagiri-hill-collapse-dead-body-ndrf

ಇನ್ನು ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Key words: kodagu- brahmagiri hill-collapse-dead body- NDRF