ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಕುಮಾರಸ್ವಾಮಿಗೆ ಗ್ರಾಮಸ್ಥರಿಂದ ತರಾಟೆ…

ಚಿಕ್ಕಮಗಳೂರು,ಆ,8,2020(www.justkannada.in):  ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂಸದೆ ಶೋಭಾಕರಂದ್ಲಾಜೆ ಮತ್ತು ಶಾಸಕ ಎಂಪಿ ಕುಮಾರಸ್ವಾಮಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡ ಘಟನೆ ನಡೆಯಿತು.jk-logo-justkannada-logo

ಭಾರಿ ಮಳೆ ಪ್ರವಾಹ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿಗೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ಇಬ್ಬರಿಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. chikkamagalore-MP- Shobha Karandlaje, - MLA –MP Kumaraswamy- villagers -Class

ಕಳೆದ ವರ್ಷ ಮಳೆಯಿಂದಾಗಿ ಬಂಕೇನಹಳ್ಳಿ ಸೇತುವೆ ಕೊಚ್ಚಿಹೋಗಿತ್ತು. ಆದರೆ ಒಂದು ವರ್ಷ ಕಳೆದರೂ ರಸ್ತೆ ನಿರ್ಮಿಸಿರಲಿಲ್ಲ. ಜತೆಗೆ ಗ್ರಾಮಸ್ಥರೇ ನಿರ್ಮಿಸಿಕೊಂಡಿದ ತಾತ್ಕಾಲಿಕ ಸೇತುವೆ ಕೂಡ ಜಲಾವೃತವಾಗಿತ್ತು. ಈ ಹಿನ್ನೆಲೆ ಸಂಸದೆ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Key words: chikkamagalore-MP- Shobha Karandlaje, – MLA –MP Kumaraswamy- villagers -Class