ಆರೋಗ್ಯ ವಿವಿ ಕುಲಪತಿ ಶೋಧನೆಗೆ ‘ಇಂಜಿನಿಯರ್ಸ್’ ಸಮಿತಿ : ಸರಕಾರಕ್ಕೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ ವಿಶ್ರಾಂತ ಕುಲಪತಿಗಳು..!

Promotion

 

ಬೆಂಗಳೂರು, ಸೆಪ್ಟೆಂಬರ್ ೧೩, ೨೦೨೧ (www.justkannada.in): ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಹೆಚ್‌ಎಸ್) ಕುಲಪತಿ ಆಯ್ಕೆ ಸಂಬಂಧ ರಚಿತಗೊಂಡಿರುವ ಶೋಧನಾ ಸಮಿತಿ ಬದಲಾಯಿಸಲು ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಲಾಗಿದೆ.

ಆರ್‌ಜಿಯುಹೆಚ್‌ಎಸ್‌ಗೆ ಕುಲಪತಿಯನ್ನು ನೇಮಕ ಮಾಡುವ ಸಂಬಂಧ ಹಾಲಿ ರಚಿಸಿರುವ ಶೋಧನಾ ಸಮಿತಿಯನ್ನು (ಸರ್ಚ್ ಕಮಿಟಿ ) ಬದಲಾಯಿಸುವಂತೆ ಕೋರಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕೆಲ ವಿಶ್ರಾಂತ ಕುಲಪತಿಗಳೇ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ‘ಜಸ್ಟ್ ಕನ್ನಡ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಶ್ರಾಂತ ಕುಲಪತಿಗಳ ಪತ್ರದ ಸಾರಾಂಶ ಹೀಗಿದೆ….

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನು ನೇಮಕ ಮಾಡುವ ಶೋಧನಾ ಸಮಿತಿಯನ್ನು ಈ ಕೆಳಕಂಡ ಕಾರಣಗಳಿಂದಾಗಿ ಬದಲಾಯಿಸಬೇಕಿದೆ:

೧. ಸಮಿತಿಯ ಅಧ್ಯಕ್ಷ ವಿದ್ಯಾಶಂಕರ್ ( ಕೆಎಸ್ ಒಯು ಹಾಲಿ ಕುಲಪತಿ ) ಅವರು ಓರ್ವ ವೈದ್ಯಕೀಯೇತರ ವ್ಯಕ್ತಿಯಾಗಿದ್ದು, ಶೋಧನಾ ಸಮಿತಿಯಲ್ಲಿ ಓರ್ವ ವೈದ್ಯಕೀಯ ವೃತ್ತಿಯ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಸೇರ್ಪಡೆ ಮಾಡುವುದು ಅಪೇಕ್ಷಣೀಯ.

೨. ಹಾಲಿ ಸಮಿತಿಯಲ್ಲಿ ಮಾಜಿ ರಾಜ್ಯಪಾಲರಿಂದ ನಾಮನಿರ್ದೇಶಿತಗೊಂಡ ಗುಜರಾತ್‌ನ ನಾಮನಿರ್ದೇಶಿತ ಸದಸ್ಯ ನವೀನ್‌ಭಾಯ್ ಶೇಠ್ ಅವರು, ಆರ್‌ಜಿಯುಹೆಚ್‌ಎಸ್‌ನ ಕಲಪತಿಗಳನ್ನು ನೇಮಕ ಮಾಡಲು ೨೦೧೭ನೇ ಸಾಲಿನಲ್ಲಿ ಹಿಂದಿನ ಶೋಧನಾ ಸಮಿತಿಯ ಸದಸ್ಯರೂ ಆಗಿದ್ದರು. ಹಾಗಾಗಿ ಅವರನ್ನು ಎರಡನೇ ಬಾರಿಗೆ ಸೇರ್ಪಡೆಗೊಳಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ.

3 . ರಾಜ್ಯಕ್ಕೆ ನೂತನ ರಾಜ್ಯಪಾಲರು ನೇಮಕಗೊಂಡಿರುವ ಕಾರಣ, ಹೊಸ ಶೋಧನಾ ಸಮಿತಿಯ ರಚನೆಯ ಅಗತ್ಯವಿದೆ.

ಆರ್‌ಜಿಯುಹೆಚ್‌ಎಸ್ ರಾಜ್ಯದಲ್ಲಿ ಅತ್ಯುತ್ತಮ ಹಾಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಒದಗಿಸಲು ಇರುವಂತಹ ಪ್ರತಿಷ್ಠಿತ ಹಾಗೂ ಅತ್ಯಂತ ಮಾನ್ಯತೆಯುಳ್ಳ ಸಂಸ್ಥೆಯಾಗಿದೆ. ಈ ಶೋಧನಾ ಸಮಿತಿಯಲ್ಲಿ ಅತ್ಯುನ್ನತ ಗುಣಮಟ್ಟ ಹಾಗೂ ಅರ್ಹತೆಯುಳ್ಳ ಉತ್ಕೃಷ್ಟ ವೈದ್ಯಕೀಯ ಶಿಕ್ಷಣ ತಜ್ಞರಿರುವುದು ಅಗತ್ಯ. ಅದರಲ್ಲೂ ಸಾಂಕ್ರಾಮಿಕ ಸವಾಲಿನ ದಿನಗಳ ಸಂದರ್ಭದಲ್ಲಿ, ಇಂತಹ ಶೈಕ್ಷಣಿಕ ನಾಯಕತ್ವಕ್ಕೆ ಕೊಡುಗೆ ನೀಡಬಲ್ಲ ಹಾಗೂ ವಿಶ್ವವಿದ್ಯಾಲಯದ ಪ್ರತಿಷ್ಠೆ ಹಾಗೂ ಗೌರವವನ್ನು ಎತ್ತಿಹಿಡಿಯಬಲ್ಲಂತಹ ನಾಯಕತ್ವ ಗುಣ ಹಾಗೂ ಮಾರ್ಗದರ್ಶಿಸಬಲ್ಲಂತಹ ವಿಶೇಷ ತಜ್ಞರನ್ನು ಒಳಗೊಂಡ ಶೋಧನಾ ಸಮಿತಿಯಿಂದ ಮುಂದಿನ ಕಲಪತಿಗಳ ನೇಮಕವಾಗಬೇಕು.

ಈ ಹಿನ್ನೆಲೆಯಲ್ಲಿ ಶೋಧನಾ ಸಮಿತಿಯನ್ನು ಮರುರಚಿಸಲು ಸಮಯೋಚಿತ ಮಧ್ಯಸ್ಥಿಕೆ ಅತ್ಯಗತ್ಯ. ಇದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದ ಸಂಶೋಧನೆ ಹಾಗೂ ಶಿಕ್ಷಣ , ತಮ್ಮ ಮಾರ್ಗದರ್ಶನದಡಿ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂದು ಪತ್ರದಲ್ಲಿ ವಿಶ್ರಾಂತ ಕುಲಪತಿಗಳು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

key words : Karnataka-rajeevgandhi-medical-university-search-committee-vc-RGUHS

ENGLISH SUMMARY….

To
Dr. K. Sudhakar
The Health and family welfare &Medical Education Minister
Government of Karnataka.
Vidhanasoudha Bangalore.

Dear Sir,
Sub: Changing the search committee for appointing Vice-Chancellor to Rajiv Gandhi University of Health Sciences, Karnataka, Bangalore Changing

The existing search committee for appointing Vice-Chancellor to Rajiv Gandhi University of Health Sciences, Karnataka, Bangalore needs to be changed for the following reasons :-

1. The Chairman of the Committee Mr. Vidyashankar is non-medical person and have only 1½ years of experience as Vice-Chancellor. It is desirable to include a medical personnel to be on the search committee.

2. The existing committee consists of the Governor nominee from Gujarath who was appointed by the past Governor.

3. The existing Governor’s nominee Mr. Navinbhai Sheth was also the member of the previous search committee in the year 2017 to appoint the Vice-Chancellor for RGUHS. There is no reason to include the same person for the second time.

4. Since new Governor has been appointed it calls for a new search committee to be formed.

As RGUHS is a renowned and highly acclaimed institution to impart best and quality Medical Education in the State, the  Search Committee should consist of eminent Medical Education Experts of highest standards and credentials.That too during the Pandemic Challenge days, the next VC should be appointed out of an outstanding Panel of nominees, who can contribute such academic Leadership and guide Karnataka State, to uphold the  Illustrious name and reputation it commands today. Your timely intervention to reconstitute the Search Committee, will surely take care of the research and teaching of Medical Education to greater heights, under your guidance.