ಬೆಲೆ ಏರಿಕೆ ವಿರೋಧಿಸಿ ‘ಎತ್ತಿನಗಾಡಿ ಚಲೋ ನಡೆಸಿದ ಕಾಂಗ್ರೆಸ್ ಗೆ ಸವಾಲು ಹಾಕಿದ ಸಚಿವ ಶ್ರೀರಾಮುಲು.

ಬೆಂಗಳೂರು,ಸೆಪ್ಟಂಬರ್,13,2021(www.justkannada.in):  ತೈಲ ಬೆಲೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಎತ್ತಿನಗಾಡಿ ಚಲೋ ನಡೆಸಿದ ಹಿನ್ನೆಲೆ ಸಚಿವ ಶ್ರೀರಾಮುಲು ಕಾಂಗ್ರೆಸ್ ಗೆ ಸವಾಲೊಂದನ್ನು ಹಾಕಿದ್ದಾರೆ.

ಕಾಂಗ್ರೆಸ್ ಗೆ ಸವಾಲೊಂದನ್ನ ಹಾಕುತ್ತೇನೆ.  ಅವರಿಗೆ ದೇಶದ ಬಗ್ಗೆ ಕಾಳಜಿ ಇದ್ದರೇ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನ ಕಡಿಮೆ ಮಾಡಲಿ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಕಾಂಗ್ರೆಸ್ ಅಂದ್ರೆ ಗಿಮಿಕ್, ಗಿಮಿಕ್ ಅಂದ್ರೆ ಕಾಂಗ್ರೆಸ್ ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಪುಕ್ಕಟೆ ಪಬ್ಲಿಸಿಟಿಗಾಗಿ ಎತ್ತಿನ ಬಂಡಿಯಲ್ಲಿ ಬಂದಿದ್ದಾರೆ ಎಂದು ಸಚಿವ ಶ್ರೀರಾಮುಲು ಲೇವಡಿ ಮಾಢಿದರು.

Key words: Minister- Sriramulu -challenged – Congress – price hike.