ಸೋಮವಾರ ಸಂಜೆಯ ‘ ಹೆಲ್ತ್ ಬುಲೆಟಿನ್ ‘ ನಲ್ಲಿ ಯಡವಟ್ಟು : ಕೆಲ ಕ್ಷಣ ಆತಂಕ….

 

ಮೈಸೂರು, ಮೇ 18, 2020 : (www.justkannada.in news ) ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಪ್ರಕರಣವೊಂದು ಬೆಳಗ್ಗಿನ ಬುಲೆಟಿನ್ ನಲ್ಲಿ ಪತ್ತೆಯಾಗಿತ್ತು. ಸಾಲದು ಎಂಬಂತೆ ಸಂಜೆ ಬುಲೆಟುನ್ ನಲ್ಲಿ ಉಂಟಾದ ಎಡವಟ್ಟು ಮತ್ತಷ್ಟು ಆತಂಕಕ್ಕೆ ನೂಕಿತ್ತು.

ಹಸಿರು ವಲಯದತ್ತ ಹೆಜ್ಜೆ ಹಾಕಿದ್ದ ಮೈಸೂರು ಜಿಲ್ಲೆ ಇದೀಗ ಕರೋನಾ ಪಾಸಿಟಿವ್ ಪ್ರಕರಣ ಒಂದು ಪತ್ತೆಯಾದ್ದರಿಂದ ಮತ್ತೆ ಕೆಂಪು ವಲಯದತ್ತ ಮುಖ ಮಾಡಬೇಕಾಗಿದೆ. ಈ ನಡುವೆ ಕರ್ನಾಟಕ ಆರೋಗ್ಯ ಇಲಾಕೆ ಸಂಜೆ ವೇಳೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ಆವಂತರಕ್ಕೆ ಕಾರಣವಾಗಿತ್ತು.

karnataka-corna-positive-mysore-health-bulleten

ಈ ಬುಲೆಟಿನ್ ನಲ್ಲಿ ಮೈಸೂರಿನಲ್ಲಿ ಕರೋನಾ ಪಾಸಿಟಿವ್ ಸಂಖ್ಯೆ 17 ಎಂದು ಆರಂಭದಲ್ಲಿ ಉಲ್ಲೇಖಿಸಲಾಗಿತ್ತು. ಬೆಳಗ್ಗೆಯಷ್ಟೆ ಕಾಣಿಸಿಕೊಂಡಿದ್ದ ಒಂದು ಪ್ರಕರಣದಿಂದಲೇ ಜನತೆ ಗಾಬರಿಗೊಂಡಿದ್ದರು, ಈಗ 17 ಪ್ರಕರಣಗಳು ಎಂಬುದು ತಿಳಿದು ಬಂದರೆ ಜನ ಮತ್ತಷ್ಟು ಆತಂಕಕ್ಕೆ ಒಳಗಾಗುವ ಸಂಭವವಿತ್ತು. ಆದರೆ ಅಷ್ಟರಲ್ಲಿ ಎಚ್ಚೆತ್ತುಕೊಂಡ ಇಲಾಖೆ, ಕಣ್ ತಪ್ಪಿನಿಂದ ಆದ ಲೋಪವನ್ನು ತಿದ್ದುಪಡಿ ಮಾಡಿ ಮತ್ತೆ ಹೊಸದಾಗಿ ಬುಲೆಟಿನ್ ಅಂಕಿ-ಅಂಶಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು.

 

key words : karnataka-corna-positive-mysore-health-bulleten