ಮೂರು ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮೈಸೂರಿನ ಬಾಲಕ…

ಮೈಸೂರು,ಡಿ,19,2019(www.justkannada.in):  ವಿಶಾಖಪಟ್ಟಣಂನಲ್ಲಿ ನಡೆದ ರೋರಲ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾದಲ್ಲಿ ಚಿನ್ನದ ಪದಕಗಳ ಬೇಟೆಯಾಡುವ ಮೂಲಕ ಮೈಸೂರಿನ ಬಾಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ.

ಮೈಸೂರಿನ ಬೋಗಾದಿ ನಿವಾಸಿ ತಮ್ಮಣ್ಣಗೌಡ  ಹಾಗೂ ಆಶಾರಾಣಿಯವರ  ಪುತ್ರ ಹರ್ಷಿತ್ ವಿಶಾಖಪಟ್ಟಣಂನಲ್ಲಿ ನಡೆದ ರೋರಲ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾದಲ್ಲಿ  ಮೂರು ಚಿನ್ನದ ಪದಕ ಗೆದ್ದು ಸಾಧನೆಗೈದಿದ್ದಾನೆ. 9-10ರವಿಭಾಗದಲ್ಲಿ ಭಾಗಿಯಾಗಿದ್ದ ಮೈಸೂರಿನ 10 ವರ್ಷದ ಬಾಲಕ ಹರ್ಷಿತ್,  ರೋಡ್ ಒನ್ ಲ್ಯಾಪ್, 509 ಮೀ. ರಿಂಕ್ ಹಾಗೂ 1000.ಮೀ ರಿಂಕ್ ನಲ್ಲಿ ಚಿನ್ನ ಗೆದ್ದಿದ್ದಾನೆ.

ಮೈಸೂರಿನ ಉನ್ನತಿ ನಗರದ ರಾವ್ ರೋಲರ್ ಸ್ಕೇಟಿಂಗ್ ನ ಕೋಚ್ ಶ್ರೀಕಾಂತ್ ರಾವ್ ತರಬೇತಿಯಲ್ಲಿ ಹರ್ಷಿತ್ ಈ ಸಾಧನೆ ಮಾಡಿದ್ದು ಮಗನ ಸಾಧನೆ ನೋಡಿ ಹರ್ಷಿತ್ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Key words: Mysore –boy- won- three -gold medals- achieved- national level.