‘ಪುಕ್ಸಟ್ಟೆ ಲೈಫ್’ನಲ್ಲಿ ಸ್ವಾಮಿ ಅಯ್ಯಪ್ಪನ ಭಜನಾವಳಿ…!

Promotion

ಬೆಂಗಳೂರು, ಜನವರಿ 26, 2019 (www.justkannada.in): ಪುಕ್ಸಟ್ಟೆ ಲೈಫಿನಲ್ಲಿ ಸ್ವಾಮಿ ಅಯ್ಯಪ್ಪನ ಭಜನಾವಳಿ…! ಪುಕ್ಸಟ್ಟೆ ಲೈಫಿನ ಸ್ವಾಮಿ ಅಯ್ಯಪ್ಪನ ಭಜನೆ.. ಪುರ್ ಸೊತ್ತೇ ಇಲ್ದೇ ಕೇಳಿ…!!!
ಅಯ್ಯಪನ ಹಾಡಿನಿಂದ ಟ್ರೆಂಡ್ ಸೃಷ್ಟಿಸ್ತಿದೆ ಪುಕ್ಸಟ್ಟೆ ಲೈಫು..!!!
ಅಯ್ಯಪನ ಭಜನೆ ಹೀಗೂ ಉಂಟು..!!! ಕೇಳಿ ಆನಂದಿಸಿ..ಇದು ಪುಕ್ಸಟ್ಟೆ ಟೀಮ್ ಗಿಫ್ಟ್..!!!

ಶಬರಿಮಲೆ ಅಯ್ಯಪ್ಪನ ಮಹಿಮೆಯನ್ನು ಸಾರಿ ಹೇಳಲು , ಸಹಸ್ರ ಭಕ್ತಕೋಟಿಯ ಆರಾಧ್ಯ ದೈವ ಸ್ವಾಮಿ ಶಬರೀಶನ ಕುರಿತಾದ ನೂರಾರು ಹಾಡುಗಳಿವೆ. ಸ್ವಾಮಿ ಏಳುಮಲೈನನ್ನು ಪೂಜಿಸುವಾಗ ಜಪಿಸೋ ಅನೇಕ ಸಿನಿಮಾ ಹಾಡುಗಳು ಬಂದು ಹೋಗಿವೆ. ಇದೇ ಸಾಲಿಗೆ ಕನ್ನಡ ಚಿತ್ರರಂಗದ ಪುಕ್ಸಟ್ಟೆ ಲೈಫು ಅನ್ನೋ ಚಲನಚಿತ್ರದ ಹೊಸ ಶೈಲಿಯ ಭಜನೆ ಹಾಡೊಂದು ಸೇರ್ಕೊಂಡು ತನ್ನದೇ ಆದ ಹವಾ ಕ್ರಿಯೆಟ್ ಮಾಡ್ತಿದೆ.

ಪುಕ್ಸಟ್ಟೆ ಲೈಫು… ಸಂಚಾರಿ ವಿಜಯ್, ಅಚ್ಯುತ್ ಕುಮಾರ್ , ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನಟಿಸಿರೋ ಸಿನಿಮಾ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ಬರ್ತಿರೋ ಈ ಸಿನೆಮಾ ನಾಗರಾಜ್ ಸೋಮಯಾಜಿ ನಿರ್ಮಿಸಿದ್ಧಾರೆ, ಅರವಿಂದ್ ಕುಪ್ಳೀಕರ್ ನಿರ್ದೇಶನದ ಜೊತೆಗೆ. ಅದೈತ ಗುರುಮೂರ್ತಿ ಛಾಯಾಗ್ರಹಣ ಹಾಗೂ ವಾಸು ದೀಕ್ಷಿತ್ ಸಂಗೀತ ಸಂಯೋಜನೆ ಸಹ ಇದೆ.

ಪೂರ್ ಸೊತ್ತೇ ಇಲ್ಲ ಅನ್ನೋ ಟ್ಯಾಗ್ ಲೈನ್ ಹೊಂದಿರೊ ಪುಕ್ಸಟ್ಟೆ ಲೈಫು ಚಲನಚಿತ್ರದಲ್ಲಿ, ಶಬರಮಲೈ ಅಯ್ಯಪ್ಪನನ್ನು ಸ್ಮರಿಸೊ ಹಾಡು ಇತ್ತೀಚೆಗಷ್ಟೇ ಸರ್ವಸ್ವ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಜೊತೆಗೆ ಎಲ್ಲಾ ಅನ್ ಲೈನ್ ಮ್ಯೂಸಿಕ್ ಫ್ಲಾಟ್ ಫಾರಂ ಹಾಗೂ ಎಫ್ ಎಮ್ ಗಳಲ್ಲಿ ಈ ಹಾಡು ಪ್ರಸಾರ ಆಗ್ತಿದ್ದು, ಕೇಳುಗರಿಂದ ಸೈ ಅನ್ನಿಸಿಕೊಂಡಿದೆ. ಈಗಾಗ್ಲೇ ಹಲವರು ಹೆಲೋ ಟ್ಯೂನ್ಸ್ ರಿಂಗ್ ಟೋನ್ಸ್ ಆಗಿ ಈ ಹಾಡು ರಿಂಗಣಿಸೋದರ ಜೊತೆಗೆ ತನ್ನದೇ ರೀತಿಯ ಹವಾ ಕ್ರಿಯೇಟ್ ಮಾಡ್ತಿದೆ. ಅಯ್ಯಪ್ಪನ ಈ ಕೀರ್ತನೆಯನ್ನು ಈಗಿನ ಮಾಡ್ರನ್ ಮ್ಯೂಸಿಕ್ ಟ್ರೆಂಡಿಗೆ ತಕ್ಕಂತೆ ವಾಸು ದೀಕ್ಷಿತ್ ಕಂಪೋಸ್ ಮಾಡಿ ಕೇಳುಗರಿಂದ ಸೈ ಎನಿಸಿಕೊಂಡಿದ್ದಾರೆ.

ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಮತ್ತು ವಾಸು ದೀಕ್ಷಿತ್ ಹಾಡಿರೋ ಈ ಹಾಡು ಕೇಳುಗರಿಗೆ ಹೊಸ ರೀತಿಯ ಅನುಭವ ನೀಡುತ್ತೆ. ಪುಕ್ಸಟ್ಟೆ ಲೈಫು ಚಿತ್ರದಲ್ಲಿ ಈ ಭಜನೆ ಹಾಡು ಪ್ರಮುಖವಾಗಿ ಕಾಣಸಿಗುತ್ತೆ. ಕೇಳಸಿಗುತ್ತೆ. ವಿಶಿಷ್ಠ ಮಜಲುಗಳನ್ನು ಹೊಂದಿರೋ ಈ ಚಲನಚಿತ್ರ, ಕಥೆಯ ಜೊತೆಯೇ ಸಾಗುತ್ತಂತೆ. ಪುಕ್ಸಟ್ಟೆ ಲೈಫು ಚಿತ್ರತಂಡ ಈ ಭಜನೆ ಹಾಡಿನ ಲಿರಿಕಲ್ ವಿಡಿಯೋವನ್ನ ರಿಲೀಸ್ ಮಾಡೋ ಮೂಲಕ ಪ್ರಚಾರ ಕಾರ್ಯ ಆರಂಬಿಸಿದ್ದಾರೆ, ಅಲ್ಲದೆ ಹಂತಹಂತವಾಗಿ ಚಿತ್ರದ ಮತ್ತಷ್ಟು ವಿಶೇಷಗಳನ್ನು ನೊಡುಗರ ಹಾಗೂ ಕೇಳುಗರ ಮುಂದೆ ಇಡ್ತೀವಿ ಅಂತ ಹೇಳ್ಕೊಂಡಿದ್ದಾರೆ.