ಸಂವಿಧಾನ ಬದಲಾಯಿಸಲು ಆರ್‍ಎಸ್‍ಎಸ್ ಪ್ಲ್ಯಾನ್: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರು

ಬೆಂಗಳೂರು, ಜನವರಿ 26, 2019 (www.justkannada.in): ಸಂವಿಧಾನವನ್ನು ಬದಲಾವಣೆ ಮಾಡಲು ಆರ್‍ಎಸ್‍ಎಸ್ ಯಾವ ರೀತಿಯ ಪ್ಲ್ಯಾನ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದೂರಿದರು.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ 71ನೇ ಗಣರಾಜ್ಯೋತ್ಸವದ ಬಳಿಕ ಮಾತನಾಡಿದ ಅವರು, ಸಂವಿಧಾನವನ್ನು ಬದಲಾವಣೆ ಮಾಡಲು ಆರ್‍ಎಸ್‍ಎಸ್ ಯಾವ ರೀತಿಯ ಪ್ಲ್ಯಾನ್ ಮಾಡಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಅವರಿಂದ ಸಂವಿಧಾನ ರಕ್ಷಣೆ ಮಾಡಬೇಕಾದ ದೊಡ್ಡ ಸವಾಲು ನಮ್ಮ ಮುಂದಿದೆ ಎಂದರು.

ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿರುವ ಸಂವಿಧಾನವನ್ನು ತೆಗೆದು ಹಾಕಬೇಕೆಂದು ಆರ್‍ಎಸ್‍ಎಸ್ ಒಳಗೊಳಗೇ ಪ್ಲ್ಯಾನ್ ಮಾಡುತ್ತಿದೆ. ಧರ್ಮದ ರಾಜಕೀಯದ ಮೂಲಕ ಹಂತ ಹಂತವಾಗಿ ಸಂವಿಧಾನವನ್ನು ಬದಲಾಯಿಸುವ ಸಿದ್ಧತೆಗಳು ನಡೆದಿವೆ. ಇದರ ವಿರುದ್ಧ ನಾವು ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.