Friday, August 14, 2026

BDA Apartments

Home Front Page ಪಕ್ಷದ್ರೋಹಿಗಳಿಗೆ ತಪ್ಪಿದ್ದು ಒಳ್ಳೇಯದೇ ಆಯ್ತು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಪಕ್ಷದ್ರೋಹಿಗಳಿಗೆ ತಪ್ಪಿದ್ದು ಒಳ್ಳೇಯದೇ ಆಯ್ತು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜನವರಿ 26, 2019 (www.justkannada.in): ಪಕ್ಷ ದ್ರೋಹಿಗಳಿಗೆ ಇದೇ ರೀತಿ ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಂಬಿಕೆ ದ್ರೋಹ ಮಾಡಿದವರಿಗೆ ಇದೇ ರೀತಿ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ. ಸೋತವರಿಗೆ ಸಚಿವ ಸ್ಥಾನ ಇಲ್ಲವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷ ದ್ರೋಹಿಗಳಿಗೆ ಇದು ಸರಿಯಾದ ಪಾಠ ಎಂದಿದ್ದಾರೆ.

ಪಕ್ಷ ದ್ರೋಹಿಗಳಿಗೆ ಇದೇ ರೀತಿ ಆಗಬೇಕು. ನಂಬಿಕೆ ದ್ರೋಹ ಮಾಡಿದವರಿಗೆ ಇದೇ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಪರಾಭವಗೊಂಡ ಹೆಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಇಲ್ಲ. ಗೆದ್ದವರಲ್ಲಿ ಕೆಲವರಿಗಷ್ಟೇ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿದ್ದು ಈ ಕುರಿತಾಗಿ ಕೇಳಲಾದ ಪ್ರಶ್ನೆಗೆ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.