‘ಎಮರ್ಜೆನ್ಸಿ’ ಇಂದಿರಾ ಗಾಂಧಿ ಆಗಲಿದ್ದಾರೆ ‘ಕಾಂಟ್ರವರ್ಸಿ’ ಕಂಗನಾ!

ಬೆಂಗಳೂರು, ಜೂನ್ 24, 2021 (www.justkannada.in): ನಟಿ ಕಂಗನಾ ರಣಾವತ್​ ‘ಎಮರ್ಜೆನ್ಸಿ’ ಚಿತ್ರದಲ್ಲಿ ನಟಿಸುತ್ತಿದ್ದು, ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಕಂಗನಾ ಮಾಹಿತಿ ನೀಡಿದ್ದಾರೆ. ಇಂದಿರಾ ಗಾಂಧಿ ಪಾತ್ರಕ್ಕಾಗಿ ಅವರು ಸಜ್ಜಾಗುತ್ತಿರುವ ಫೋಟೋವನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ.

ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಅವರು ‘ಮಣಿಕರ್ಣಿಕಾ’ ಚಿತ್ರವನ್ನು ನಿರ್ದೇಶಿಸಿದ್ದರು.

ಸಾಕಷ್ಟು ಅವಕಾಶಗಳಿದ್ದರೂ ಸ್ವತಃ ಆ್ಯಕ್ಸನ್ ಕಟ್ ಹೇಳಿ ಬಹುನಿರೀಕ್ಷಿತ ಚಿತ್ರಕ್ಕೆ ಚಾಲನೆ ನೀಡಲು ಸಜ್ಜಾಗಿದ್ದಾರೆ. ಮೊದಲಿನಿಂದಲೂ ಕಂಗನಾ ಅವರು ಬಿಜೆಪಿ ಪರವಾಗಿ ಗುರುತಿಸಿಕೊಂಡಿದ್ದು, ಇದೀಗ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.