ಕಲ್ಬುರ್ಗಿ ಪಾಲಿಕೆಯಲ್ಲಿ ಮೈತ್ರಿ ವಿಚಾರ: ಹೆಚ್.ಡಿ ದೇವೇಗೌಡರ ಉತ್ತರಕ್ಕಾಗಿ ಕಾಯುತ್ತಿದ್ದೇವೆ- ಮಲ್ಲಿಕಾರ್ಜುನ ಖರ್ಗೆ.

ಮಂಗಳೂರು,ಸೆಪ್ಟಂಬರ್,11,2021(www.justkannada.in):  ಕಲ್ಬುರ್ಗಿ ಮಹಾ ನಗರ ಪಾಲಿಕೆಯಲ್ಲಿ  ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ  ಬಗ್ಗೆ ಹೆಚ್.ಡಿ ದೇವೇಗೌಡರಿಗೆ ಕರೆ ಮಾಡಿ ಚರ್ಚಿಸಿದ್ದು ನಿಜ. ಈಗ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾನು ದೇವೇಗೌಡರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದು ನಿಜ. ನಮ್ಮ ಸಂಖ್ಯಾಬಲ ಹೆಚ್ಚಿದೆ. ಹೀಗಾಗಿ ಬೆಂಬಲ ಕೊಡಿ ಎಂದು ಕೇಳಿದ್ದೇನೆ. ಹೆಚ್.ಡಿ. ದೇವೇಗೌಡರ ಉತ್ತರಕ್ಕಾಗಿ ನಾವು ಕಾಯುತ್ತಿದ್ದೇವೆ. ಎಲ್ಲವೂ ವಿಶ್ವಾಸದ ಮೇಲೆ ನಡೆಯುತ್ತೆ, ಹೀಗಾಗಿ ಕಾಯ್ತೇವೆ ಏನಾಗುತ್ತೋ ಕಾದು ನೋಡೋಣ  ಎಂದು ತಿಳಿಸಿದರು.

ಕಲಬುರಗಿ ನಗರ ಪಾಲಿಕೆ ಚುನಾವಣಾ ಫಲಿತಾಂಶ ಅತಂತ್ರ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಅಧಿಕಾರ ಪಡೆಯಲು ವಿವಿಧ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಸದ್ಯ ರೆಸಾರ್ಟ್​​ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಪಾಲಿಕೆ ಸದಸ್ಯರು ಇನ್ನೂ ಕಲಬುರಗಿಯತ್ತ ತೆರಳಿಲ್ಲ. ಬೆಂಗಳೂರು ಹೊರವಲಯದ ರೆಸಾರ್ಟ್​​ನಲ್ಲಿ ಜೆಡಿಎಸ್ ಸದಸ್ಯರು ವಾಸ್ತವ್ಯ ಹೂಡಿದ್ದಾರೆ. ರೆಸಾರ್ಟ್​ನಲ್ಲಿ ಇದ್ದುಕೊಂಡು ಹೆಚ್​.ಡಿ. ಕುಮಾರಸ್ವಾಮಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.

Key words: Kalburgi –city corporation- Alliance-JDS-HD Deve Gowda-Congress-Mallikarjuna kharge