ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಕೆಆರ್ ಎಸ್ ಅಣೆಕಟ್ಟೆ ನೀರಿನ ಮಟ್ಟ ಏರಿಕೆ…

ಮೈಸೂರು,ಜು,8,2020(www.justkannada.in): ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಯಾಗುತ್ತಿರುವ ಹಿನ್ನೆಲೆ ಕೆಆರ್ ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ.jk-logo-justkannada-logo

ಹಲವು ದಿನಗಳಿಂದ ಕಾವೇರಿ ಕೊಳ್ಳಗಳಲ್ಲಿ ಉತ್ತಮ ಮಳೆಯಾಗುತ್ತಿದೆ.  ಹೀಗಾಗಿ ಕೆಆರ್ ಎಸ್ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗಿದ್ದು  ಅಣೆಕಟ್ಟೆಯ ನೀರಿನ ಮಟ್ಟ100 ಅಡಿ ತಲುಪಿದೆ. ಕೆಆರ್ ಎಸ್ ನಲ್ಲಿ ಪ್ರಸ್ತುತ 22.654 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಬಿನಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು…..

ಇನ್ನೊಂದೆಡೆ ಕೇರಳ ಭಾಗದಲ್ಲಿ ಮಳೆ  ಹೆಚ್ಚಾಗಿದ್ದು ಈ ಹಿನ್ನೆಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ  ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಒಳಹರಿವು 10 ಸಾವಿರ ಕ್ಯೂಸೆಕ್ ದಾಟಿದೆ.kabini-reservoir-krs-dam-water-level-rise

ಕಬಿನಿ ಜಲಾಶಯದ ನೀರಿನ ಮಟ್ಟ ಹೀಗಿದೆ.

ಜಲಾಶಯದ ಇಂದಿನ ಒಳಹರಿವು 11,324 ಕ್ಯೂಸೆಕ್.

ಜಲಾಶಯದ ಇಂದಿನ ಹೊರಹರಿವು 1500 ಕ್ಯೂಸೆಕ್.

ಜಲಾಶಯದ ಇಂದಿನ ನೀರಿನ ಮಟ್ಟ 2267.88 ಅಡಿ.

ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ.

ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 TMC

ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 10.67 TMC

Key words: Kabini -Reservoir- KRS- Dam- water –level- rise