ಕಬಿನಿ ಡ್ಯಾಂ ಗೇಟ್ ಎತ್ತುವ ವೈಪರ್ ವೈಯರ್  ಕಟ್: ಸಿಬ್ಬಂದಿಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ…

Promotion

ಮೈಸೂರು,ಆ,11,2019(www.justkannada.in):  ಭಾರಿ ಮಳೆಯಿಂದಾಗಿ ಕಬಿನಿ ಜಲಾಶಯದಿಂದ ನದಿಗಳಿಗೆ ನೀರು ಹರಿಯಬಿಡಲಾಗುತ್ತಿದೆ. ಈ ನಡುವೆ ಕಬಿನಿ ಡ್ಯಾಂ ಗೇಟ್ ಎತ್ತುವ ವೈಪರ್ ವೈಯರ್  ಕಟ್ ಆಗಿದ್ದು  ಅಲ್ಲಿನ ಸಿಬ್ಬಂದಿಗಳು ಕ್ರಷ್ ಗೇಟ್ ಬಳಿ ನಿಂತು ಕೆಲಸ ಮಾಡುತ್ತಿದ್ದಾರೆ.

ಕಬಿನಿಯಲ್ಲಿ ನಾಲ್ಕು ಗೇಟ್ ಮೂಲಕ ನೀರು ಹರಿಸಲಾಗುತ್ತೆ. ಆದರೆ ಮೂರು ಗೇಟ್‌ನಿಂದ 1ಲಕ್ಷ ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದ್ದು,  ಮೂರು ಗೇಟ್ ಗಳ ಮೇಲೆ ಒತ್ತಡ ಹೆಚ್ಚಿದೆ. ಇದೀಗ ನಾಲ್ಕು ದಿನದಿಂದ ಮೊದಲ ಗೇಟನ ವೈಪರ್ ಕಟ್ ಆಗಿದ್ದು ಸಿಬ್ಬಂದಿಗಳು ಕ್ರಷ್ ಗೇಟ್ ಬಳಿ ನಿಂತು ಕೆಲಸ ಮಾಡಿತ್ತಿದ್ದಾರೆ.  ರಾತ್ರಿವೇಳೆಯಲ್ಲೂ ಸಿಬ್ಬಂದಿ ಡ್ಯಾಂ ಕೆಲಸ ಮಾಡುತ್ತಿದ್ದಾರೆ.

ಇನ್ನು ವೈಪರ್ ಕಟ್ ಆಗಿರುವ ಬಗ್ಗೆ ಮಾಹಿತಿ ಇದ್ದರು ಅಧಿಕಾರಿಗಳು ಸುಮ್ಮನ್ನಿದ್ದರು ಎಂಬ ಆರೋಪ ಕೇಳಿಬಂದಿದೆ. ಇದನ್ನ ರಿಪೇರಿಗೆ ಮಾಡಿಸಲು ಅಧಿಕಾರಿಗಳು ಮುಂದಾಗದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಇಷ್ಟು ದಿನ ಸುಮ್ಮನಿದ್ದು, ಇದೀಗಾ ಡ್ಯಾಂನ ಗೇಟ್ ಎತ್ತುವ ವೈಪರ್ ವೈಯರ್  ರಿಪೇರಿ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸದಿದ್ದಾರೆ.

ಈ ಮೂಲಕ ಅಧಿಕಾರಿಗಳು ಸಿಬ್ಬಂದಿಗಳ ಜೀವದ ಜೊತೆ  ಚೆಲ್ಲಾಟವಾಡುತ್ತಿದ್ದು ಅಧಿಕಾರಿಗಳ ನಡೆ ಯುದ್ಧಕಾಲದಲ್ಲಿ ಶಸ್ತ್ರಭ್ಯಾಸ ಎಂಬಂತಾಗಿದೆ.

Key words: Kabini Dam- Gate –Lifting- Viper Wire- Cut-Officers