ವಿದ್ಯುತ್ ಪ್ರವಹಿಸಿ ಜೂನೀಯರ್ ಪವರ್ ಮ್ಯಾನ್ ಸ್ಥಳದಲ್ಲೇ ಸಾವು….

Promotion

ಮೈಸೂರು,ಏಪ್ರಿಲ್,23,2021(www.justkannada.in):  ವಿದ್ಯುತ್ ಪ್ರವಹಿಸಿ ಜೂನೀಯರ್ ಪವರ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk

ಪಿರಿಯಾಪಟ್ಟಣ ತಾಲೂಕಿನ ಕಣಗಾಲು ವಿದ್ಯುತ್ ಉಪ ಕೇಂದ್ರದಲ್ಲಿ ಪವರ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಮೀರ್ ಖಾನ್ ಮೃತಪಟ್ಟ ದುರ್ದೈವಿ. ಅಮೀರ್ ಖಾನ್ (25) ಮೂಲತಃ ದಾವಣಗೆರೆಯನಾಗಿದ್ದು, ನಿನ್ನೆ ಸಂಜೆ 4 ಗಂಟೆಯ ವೇಳೆಯಲ್ಲಿ ಜೂನೀಯರ್ ಇಂಜಿನೀಯರ್ ಬಳಿ ಅನುಮತಿ ಪಡೆದು ಕೆಲಸ ಮಾಡುವಾಗ ಈ ಘಟನೆ ನಡೆದಿದೆ.junior-powerman-dies-on-the-spot

ಪಿರಿಯಾಪಟ್ಟಣ ತಾಲ್ಲೂಕಿನ ಸುಬ್ಬಯ್ಯನಕೊಪ್ಪಲು ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ರಿಪೇರಿ ಮಾಡುವಾಗ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಟ್ರಾನ್ಸ್ ಫಾರ್ಮರ್ ನಿಂದ ಕೆಳಕ್ಕೆ ಬಿದ್ದು ಅಮೀರ್ ಖಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Junior –Powerman- dies -on the spot.