JK EXCULUSIVE : ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ ಮೈಸೂರು ವಿವಿ

kannada t-shirts

ಮೈಸೂರು, ಆ.07, 2021 : (www.justkannada.in news) : ಪಿಹೆಚ್.ಡಿ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಆಧಾರಿಸಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ದಂಪತಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಾಯನ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಟಿ.ರಾಮಚಂದ್ರಪ್ಪ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ಅವರಿಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಕುಲಸಚಿವ ಪ್ರೊ.ಶಿವಪ್ಪ ಅವರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.

ನೋಟೀಟ್ ನ ಒಟ್ಟಾರೆ ವಿವರ ಹೀಗಿದೆ…

ಡಾ.ಎನ್.ಕೆ.ಲೋಲಾಕ್ಷಿ :

ಮೈಸೂರು ಆದ ನೀವು, ನಿಮ್ಮ ಪತಿ ಡಾ. ಜಿ.ಟಿ.ರಾಮಚಂದ್ರಪ್ಪ, ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು ಇವರು ಪಿಹೆಚ್.ಡಿ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆಂದು ಆರೋಪಿಸಿ ದಿನಾಂಕ 6-8-2021ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಮತ್ತು ದೃಶ್ಯಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವಿಷಯವು ವಿಶ್ವವಿದ್ಯಾನಿಲಯದ ಗಮನಕ್ಕೆ ಬಂದಿರುತ್ತದೆ. ನೀವು ಮತ್ತು ನಿಮ್ಮ ಪತಿ ಇಬ್ಬರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಾಗಿದ್ದು, ನೀವು ಪ್ರಕರಣವನ್ನು ಸರಿಯಾಗಿ ಪರಾಮರ್ಶಿಸದೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಮತ್ತು ಹೇಳಿಕೆ ನೀಡುವ ಮುನ್ನ ವಿಶ್ವವಿದ್ಯಾನಿಲಯದ ಪೂರ್ವಾನುಮತಿ ಪಡೆಯದೇ ಇರುವುದು ವಿಶ್ವವಿದ್ಯಾನಿಲಯದ ನಿಯಮಗಳಿಗೆ ವಿರುದ್ಧವಾಗಿರುತ್ತದೆ. ನಿಮ್ಮ ಈ ರೀತಿಯ ಹೇಳಿಕೆಗಳಿಂದ ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವಕ್ಕೆ ಧಕ್ಕೆಯುಂಟಾಗಿರುತ್ತದೆ. ಈ ನಡವಳಿಕೆಯು ಮೇಲ್ನೋಟಕ್ಕೆ ಅಶಿಸ್ತಿನಿಂದ ಕೂಡಿರುವಂತದ್ದಾಗಿದೆ. ಈ ಸಂಬಂಧ ಸಿಸಿಎ ಅಧಿನಿಯಮದನ್ವಯ ನಿಮ್ಮ ಮೇಲೆ ಏಕೆ ಶಿಸ್ತುಕ್ರಮ ಜರುಗಿಸಬಾರದು ಎಂಬುದರ ಬಗ್ಗೆ ಲಿಖಿತ ಹೇಳಿಕೆಯನ್ನು ಈ ನೋಟೀಸ್ ತಲುಪಿದ 03 ದಿನಗಳ ಒಳಗಾಗಿ ನೀಡಬೇಕೆಂದು ನಿರ್ದೇಶಿಸಲಾಗಿದೆ. ಇಲ್ಲವಾದಲ್ಲಿ ಈ ವಿಷಯದ ಸಂಬಂಧ ನೀವು ಹೇಳುವುದು ಇಲ್ಲವೆಂದು ಪರಿಗಣಿಸಿ, ಕ್ರಮಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ. ಸಿಸಿಎ ಅಧಿನಿಯಮಗಳನ್ವಯ ಮುಂದಿನ ಕ್ರಮ ಜರುಗಿಸಲಾಗುವುದು.

ಡಾ.ಜಿ.ಟಿ.ರಾಮಚಂದ್ರಪ್ಪ :

ದಿನಾಂಕ 6-8-2021ರ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯಮಾಧ್ಯಮಗಳಲ್ಲಿ ನೀವು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತೀರಿ ಎಂದು ಪ್ರಕಟವಾಗಿರುವ ವಿಷಯವು ವಿಶ್ವವಿದ್ಯಾನಿಲಯದ ಗಮನಕ್ಕೆ ಬಂದಿರುತ್ತದೆ. ಈ ವಿಷಯವು ಬಹಳ ಗಂಭೀರ ಮತ್ತು ಸೂಕ್ಷ್ಮವಾಗಿದ್ದು, ಇದರಿಂದ ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದಾಗಿರುತ್ತದೆ. ಆದ್ದರಿಂದ ತಾವು ವಿಶ್ವವಿದ್ಯಾನಿಲಯದ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಲಿಖಿತ ಹೇಳಿಕೆಯನ್ನು ಈ ನೋಟೀಸ್ ತಲುಪಿದ 03 ದಿನಗಳ ಒಳಗಾಗಿ ನೀಡಬೇಕೆಂದು ಈ ಮೂಲಕ ಸೂಚಿಸಲಾಗಿದೆ. ಇಲ್ಲವಾದಲ್ಲಿ ಈ ವಿಷಯದ ಸಂಬಂಧ ನೀವು ಹೇಳುವುದು ಏನು ಇಲ್ಲವೆಂದು ಪರಿಗಣಿಸಿ, ಸಿಸಿಎ ಅಧಿನಿಯಮಗಳನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ತಿಳಿಸಲಾಗಿದೆ ಎಂದು ಕುಲಸಚಿವರು ನೋಟಿಸ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

 

key words : Mysore-university-sexual-abuse-case-notice-issued-to-professors-vc-uom

ENGLISH SUMMARY :

 

UoM issues show cause notice to professor couple.

Mysuru, August 7, 2021 (www.justkannada.in): The University of Mysore has issued a show cause notice to a couple who are working as professors, following allegation of sexual harassment on a Ph.D. student appeared in the media.
As per the instructions of Prof. G. Hemanth Kumar, Vice-Chancellor, University of Mysore, Prof. Shivappa, Registrar, University of Mysore has issued the show cause notice to Dr. G.T. Ramachandrappa, who is a Professor in the Political Science Research Division, Manasagangotri and Dr. N.K. Lolakshi, Professor, at the Kuvempu Kannada Research Centre.


The details of the notice are as follows:
Dr. N.K. Lolakshi: The University of Mysore has noticed the news appeared in print and electronic media, alleging sexual harassment on a Ph.D. student involving you and your husband Dr. G.T. Ramachandrappa, Professor, Political Science Research Department, on August 6, 2021. Both of you are professors of this prestigious University. You have violated the rules of the University by giving statements to the media, without referring the case properly and without taking prior permission of the University before doing so. Such statements will bring disrespect to the University. It appears as indiscipline. Hence, a show cause notice is issued instructing you to reply within 3 days after receiving this notice, failing which disciplinary action will be initiated as per CCA Rules, considering it as your acceptance.


Dr. G.T. Ramachandrappa: Through the recent news reports appeared in the print and electronic media, the University of Mysore has come to know the allegations of sexual harassment by you on a Ph.D. student. As this matter is very serious and sensitive, we would like to inform you that it brings disrespect to the University. As you are working in a respectable post in the University you are requested to reply in writing within 3 days after receiving this show cause notice, failing which action will be taken as per CCA rules considering that you have agreed to have committed the crime.

Keywords: University of Mysore/ Vice-Chancellor/ Registrar/ Professors/ sexual harassment/ allegations/ media reports

 

 

website developers in mysore