ಜೆಡಿಎಸ್ ಬಗ್ಗೆ ಈಗಲೂ ಬೇಸರ: ಆದರೂ ಕುಪೇಂದ್ರ ರೆಡ್ಡಿ ಅವರಿಗೆ ನನ್ನ ಮತ- ಶಾಸಕ ಜಿ.ಟಿ ದೇವೇಗೌಡ.

Promotion

ಬೆಂಗಳೂರು,ಜೂನ್,10,2022(www.justkannada.in):  ಇಂದು ರಾಜ್ಯದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಈ ಮಧ್ಯೆ ಮತದಾನ ಅಂತ್ಯವಾಗಿದೆ. ಇಂದು ಸಂಜೆ ಫಲಿತಾಂಶ ಪ್ರಕಟವಾಗಲಿದೆ.

ವಿಧಾನಸೌಧದಲ್ಲಿ  ಮತದಾನ ಪ್ರಕ್ರಿಯೆ ನಡೆದಿದ್ದು 224 ಶಾಸಕರು ತಮ್ಮ ಮತ ಚಲಾಯಿಸಿದ್ದಾರೆ. ಇನ್ನು ಜೆಡಿಎಸ್ ನ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಅಡ್ಡಮತದಾನ ಮಾಡಿದ್ದಾರೆ.

ಈ ಮಧ್ಯೆ ಮತ್ತೊಬ್ಬ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಅಡ್ಡಮತದಾನ ಮಾಡುವ ಅನುಮಾನ ಇತ್ತು. ಆದರೆ ಈ ಬಗ್ಗೆ ನಿನ್ನೆಯೇ ಸ್ಪಷ್ಟನೆ ನೀಡಿದ್ದ ಜಿ.ಟಿ ದೇವೇಗೌಡರು, ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದಿದ್ದರು. ಅಂತೆಯೇ ಇಂದು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಶಾಸಕ ಜಿ.ಟಿ ದೇವೇಗೌಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ.mysore-district-mla-gt-deve-gowda-expressed-doubts-death

ಈ ಕುರಿತು ಮಾತನಾಡಿರುವ ಅವರು,  ಜೆಡಿಎಸ್ ನೋಡಿ ಜನ ನನ್ನನ್ನ ಗೆಲ್ಲಿಸಿದ್ದಾರೆ. ಈಗಲೂ ಜೆಡಿಎಸ್ ಬಗ್ಗೆ ನನಗೆ ಬೇಸರವಿದೆ. ಆದರೂ ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರಿಗೆ ಮತ ಚಲಾಯಿಸುವೆ.  ನಾನು ನನ್ನ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವೆ ಎಂದಿದ್ದಾರೆ.

Key words: JDS-My vote -Kuppendra Reddy – MLA- GT Deve Gowda.