ಕಿಚ್ಚ ಸುದೀಪ್’ಗೆ ಗಿಫ್ಟ್ ನೀಡಿದ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋಸ್ ಬಟ್ಲರ್

ಬೆಂಗಳೂರು, ಜೂನ್ 10, 2020 (www.justkannada.in): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಗಿಫ್ಟ್‌ ಸಿಕ್ಕಿದೆ.

ಹೌದು.  ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್. ಬ್ಯಾಟ್‌ ಗಿಫ್ಟ್ ನೀಡಿದ್ದಾರೆ.

ಜೋಸ್‌ ಬಟ್ಲರ್‌ ನೀಡಿದ ಬ್ಯಾಟ್‌ ಅನ್ನು ಹಿಡಿದು, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಚಕ್ರವರ್ತಿ’ ನಟ ಕಿಚ್ಚ ಸುದೀಪ್‌.

ಸ್ಪೆಷಲ್ ಬ್ಯಾಟ್‌ ತಮ್ಮ ಕೈಸೇರಲು ಕಾರಣರಾದ ರಾಜಸ್ಥಾನ ರಾಯಲ್ಸ್ ಟೀಂ ಪ್ಲೇಯರ್‌ ಹಾಗೂ ಕನ್ನಡಿಗ ಕೆ.ಸಿ.ಕಾರ್ಯಪ್ಪ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಇತರ ಆಟಗಾರರಿಗೂ ಸುದೀಪ್‌ ಧನ್ಯವಾದ ಅರ್ಪಿಸಿದ್ದಾರೆ.

ಅಂದಹಾಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್‌ ರೋಣ’ ರಿಲೀಸ್‌ಗೆ ರೆಡಿಯಾಗಿದ್ದು, ಅಭಿಮಾನಿಗಳು ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.