Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಜಯದೊಂದಿಗೆ ರಣಜಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟ ಮುಂಬೈ

ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಜಯದೊಂದಿಗೆ ರಣಜಿ ಸೆಮಿಫೈನಲ್’ಗೆ ಎಂಟ್ರಿ ಕೊಟ್ಟ ಮುಂಬೈ

ಬೆಂಗಳೂರು, ಜೂನ್ 10, 2020 (www.justkannada.in): ದಾಖಲೆಯ ರಣಜಿ ಚಾಂಪಿಯನ್‌ ಮುಂಬೈ ತಂಡ 725 ರನ್‌ ಗಳಭಾರೀ ಅಂತರದಿಂದ ಉತ್ತರಾಖಂಡ್‌ ತಂಡವನ್ನು ಸೋಲಿಸಿ ಮತ್ತೊಂದು ದಾಖಲೆ ಬರೆದಿದೆ.

ಪ್ರಥಮದರ್ಜೆ ಕ್ರಿಕೆಟ್‌ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವಿನ ದಾಖಲೆಯನ್ನು ಮುಂಬೈ ತಂಡ  ಬರೆದಿದೆ. ನಾಲ್ಕು ದಿನಗಳ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸುಲಭ ಗೆಲುವು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

92 ವರ್ಷಗಳ ಹಿಂದೆ ನ್ಯೂ ಸೌಥ್‌ ವೇಲ್ಸ್‌ ತಂಡ 685 ರನ್‌ ಗಳಿಂದ ಕ್ವಿನ್ಸ್‌ ಲ್ಯಾಂಡ್‌ ತಂಡವನ್ನು ಸೋಲಿಸಿದ್ದು ಇದುವರೆಗಿನ ಅತೀ ದೊಡ್ಡ ಗೆಲುವಿನ ದಾಖಲೆಯನ್ನು ಮುರಿಯಿತು.

ರಣಜಿ ಇತಿಹಾಸದಲ್ಲೇ ಅತೀ ಗೆಲುವು ದಾಖಲಿಸಿದ ಕೀರ್ತಿ ಬಂಗಾಳ ತಂಡಕ್ಕೆ ಇತ್ತು. ಈ ತಂಡ 1954-55ರಲ್ಲಿ ಒಡಿಶಾ ವಿರುದ್ಧ 540 ರನ್‌ ಗಳಿಂದ ಸೋಲಿಸಿ ದಾಖಲೆ ಬರೆದಿತ್ತು.