ಜಯಂತ್ ಪಾಟೀಲ್ ಶಾಸಕನಾಗಲು ಅಯೋಗ್ಯ- ಸಚಿವ ಗೋವಿಂದ ಕಾರಜೋಳ ಕಿಡಿ.

ಬೆಳಗಾವಿ,ಡಿಸೆಂಬರ್,21,2022(www.justkannada.in):  ಗಡಿ ವಿವಾದ ಬೆನ್ನಲ್ಲೇ ಮಹಾರಾಷ್ಟ್ರ ಮತ್ತೊಂದು ತಗಾದೆ ಎತ್ತಿದ್ದು, ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಂನಿಂದ ನೀರು ಕೊಡದಂತೆ  ಹೇಳಿರುವ ಎನ್‌ಸಿಪಿ ಶಾಸಕ ಜಯಂತ ಪಾಟೀಲ್ ಗೆ  ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಜಯಂತ್ ಪಾಟೀಲ್ ಶಾಸಕನಾಗಲು ಅಯೋಗ್ಯ. ಮಹಾರಾಷ್ಟ್ರ ಗೂಂಡಾಗಿರಿ ಸರಿಯಲ್ಲ. ನೀರನ್ನ ತಡೆಯಲು  ಯಾರಿಂದಲೂ ಆಗಲ್ಲ. ಕೆಟ್ಟ ಭಾಷೆಯಲ್ಲಿ ಹೇಳೋದಾದರೇ ಅವರ ಅಪ್ಪನಿಂದಲೂ ಸಾಧ್ಯವಿಲ್ಲ ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಜಯಂತ್ ಪಾಟೀಲ್ ಹೇಳಿಕೆ ಖಂಡಿಸುತ್ತೇನೆ. ಮಹಾರಾಷ್ಟ್ರದ ಇಂತ ಗೂಂಡಾಗಿರಿ ನಡವಳಿಕೆ ಸರಿಯಲ್ಲ ಸುಸಂಸ್ಕೃತರಷ್ಟೆ ಸಮಾಜಸೇವೆಗೆ ಯೋಗ್ಯರು. ಗಡಿ ಭಾಗದ ಜನರು ನೆಮ್ಮದಿಯಿಂದಿದ್ದಾರೆ. ತೊಂದರೆ ಕೊಡಬಾರದು ಎಂದು  ಎನ್ ಸಿಪಿ ಶಾಸಕ ಜಯಂತ್ ಪಾಟೀಲ್ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು.

ಕರ್ನಾಟಕ ಸಿಎಂ ಬೊಮ್ಮಾಯಿಗೆ ತುಂಬಾನೇ ಸೊಕ್ಕು ಬಂದಿದೆ. ಕರ್ನಾಟಕಕ್ಕೆ ನಾವು ತಕ್ಕ ಪಾಠ ಕಲಿಸಬೇಕಿದೆ. ಕೊಯ್ನಾ, ಕೊಲ್ಹಾಪುರ ಜಿಲ್ಲೆಯ ಡ್ಯಾಂಗಳ ಎತ್ತರ ಹೆಚ್ಚಿಸಬೇಕು  ಎಂದು ಶಾಸಕ ಜಯಂತ್ ಪಾಟೀಲ್ ಹೇಳಿಕೆ ನೀಡಿದ್ದರು.

Key words: Jayant Patil -unfit – MLA-Minister -Govind Karajola