ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಾವಾ ಮೋಟಾರ್ ಬೈಕ್ ರ್ಯಾಲಿ: 300 ಹೆಚ್ಚು ಬೈಕ್ ಗಳು ಭಾಗಿ

Promotion

ಮೈಸೂರು,ಜು,14,2019(www.justkannada.in): ಜಾವಾ ಡೇ ಅಂಗವಾಗಿ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಜಾವಾ ಮೋಟಾರ್ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು.

ಮೈಸೂರು ಜಾವಾ ಬೈಕ್ ಅಸೋಸಿಯೇಷನ್ ನಿಂದ ಬೈಕ್ ರ್ಯಾಲಿ ಅಯೋಜನೆ ಮಾಡಲಾಗಿದ್ದು ನಗರದ ವಿವಿಧ ಭಾಗಗಳಲ್ಲಿ ಜಾವಾ ಬೈಕ್ ಸವಾರರು ಸಂಚಾರ ಮಾಡಿದರು. ಹಳೆಯ ಜಾವಾ ಬೈಕ್ ಗಳಿಂದ ಹಿಡಿದು ಹೊಸ ಮಾದರಿಯ ಜಾವಾ ಕಂಪನಿಯ 300 ಹೆಚ್ಚು ಬೈಕ್ ಗಳು ಭಾಗಿ ರ್ಯಾಲಿಯಲ್ಲಿ ಭಾಗಿಯಾಗಿದ್ದವು. ಈ ಮೂಲಕ ಇಂದು ಮೈಸೂರಿನಲ್ಲಿ ಜಾವಾ ಬೈಕ್ ಸದ್ದು ಮಾಡಿದವು.

ಜಾವಾ ಬೈಕ್ ಪ್ರೇಮಿ ಸಲ್ಲಾವುದಿನ್ ಮಾತನಾಡಿ, ನಮ್ಮ ಮೈಸೂರಿನ ಕಂಪನಿ ದೇಶದಲ್ಲಿಯೇ ಮಾದರಿ ಯಾಗಿತ್ತು. ಇಂದಿನ ಹೊಸ ಬೈಕ್ ರೈಡರ್ ಗಳಿಗೂ ಈ ಬೈಕ್ ಅಚ್ಚುಮೆಚ್ಚಾಗಿದೆ. ಲಾಂಗ್ ಡ್ರೈವ್ ಗಾಗಿ ತಕ್ಕ ಮೋಟಾರ್ ಗಾಡಿಯಾಗಿದೆ ಎಂದು ಸಂತಸ ಹಂಚಿಕೊಂಡರು.

Key words: Java -motorbike- rally  – Mysore.