ಜಾನುವಾರು ಸಾಕಲು ಆಗಲ್ಲ ಅಂದ್ರೆ ನನ್ನ ಮನೆಗೆ ತಂದು ಬಿಡಿ : ಸಚಿವ ಆರ್.ಅಶೋಕ್ 

ಬೆಂಗಳೂರು, ಡಿಸೆಂಬರ್,11,2020(www.justkannada.in) : ಜಾನುವಾರು ಸಾಕಲು ಆಗಲ್ಲ ಅಂದ್ರೆ, ಬಿಜೆಪಿ ಕಚೇರಿ ಬಳಿ ತಂದು ಬಿಡಿ ಅಥವಾ ನನ್ನ ಮನೆಗೆ ತಂದು ಬಿಡಿ ನಾನು ಸಾಕುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.logo-justkannada-mysore

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಲಿದೆ. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಿದ್ದಾರೆ. ಗೋವುಗಳನ್ನು ಸಾಕಲಾಗದಿದ್ದರೆ ಗೋ ಶಾಲೆಗೆ ತಂದು ಬಿಡಿ. ನಾವು ಗಂಡು ಕರು, ವಯಸ್ಸಾದ ಹಸುಗಳನ್ನು ಸಾಕುತ್ತೇವೆ. ಜೊತೆಗೆ,ನಿಮ್ಮ ಹಿರಿಯರನ್ನು ಕೂಡ ಸಾಕುತ್ತೇವೆ,ಕಳುಹಿಸಿಕೊಡಿ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ನಾವೇನು ಗುಲ್ಡುಗಳಲ್ಲ. ನಾವೂ ರಾಜಕೀಯ ಚಾಣಾಕ್ಷರೇ

ತುರ್ತು ಪರಿಸ್ಥಿತಿಯನ್ನು ತಂದವರು ಕಾಂಗ್ರೆಸ್ ನವರು. ಅವರಿಂದ ನಾವು ಪಾಠ ಕಲಿಯುವ ಅವಶ್ಯಕತೆಯಿಲ್ಲ. ಪರಿಷತ್ ನಲ್ಲಿ ನೀವು ಏನು ಮಾಡ್ತೀರಾ ಎಂದು ಗೊತ್ತಿತ್ತು. ನಾವೇನು ಗುಲ್ಡುಗಳಲ್ಲ. ನಾವೂ ರಾಜಕೀಯ ಚಾಣಾಕ್ಷರೇ. ಹೀಗಿರುವುದಕ್ಕೆ ನಾವು ಸರ್ಕಾರ ಮಾಡಿರೋದು. ಗೋಹತ್ಯೆ ನಿಷೇಧ ತಿದ್ದುಪಡಿ ಬಿಲ್ ಜಾರಿ ಮಾಡುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕು ಎಂದು ನಮಗೆ ಗೊತ್ತು ಎಂದು ಹೇಳಿದ್ದಾರೆ.

ಉಳುವವನೇ ಭೂಮಿ ಒಡೆಯ ಕಾಯ್ದೆ ಬದಲಿಸಿಲ್ಲ

ದಲಿತರ ಜಮೀನು ದಲಿತರಿಗೆ ಮಾತ್ರ ಮಾರಬೇಕು. ಸರ್ಕಾರದ ಅನುಮತಿ ಪಡೆದೇ ಖರೀದಿ ಮಾಡಬೇಕು. ಉಳುವವನೇ ಭೂಮಿ ಒಡೆಯ ಕಾಯ್ದೆ ಬದಲಿಸಿಲ್ಲ. ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡೋದು ಬೇಡ ಎಂದರು.

Cow,slaughter,Prohibition,bring,law,Minister,R.Ashok

key words : Livestock-Farming-Not-Bring-my-Home-Minister- R.Ashok