ಕೆಪಿಸಿಸಿ ಕಿಸಾನ್ ಸೇಲ್ ರಾಜ್ಯ ಸಂಚಾಲಕನ ನಿವಾಸದ ಮೇಲೆ ಐಟಿ ದಾಳಿ, ಪರಿಶೀಲನೆ.

Promotion

ಚಿಕ್ಕಮಗಳೂರು,ಜನವರಿ,16,2023(www.justkannada.in): ಕೆಪಿಸಿಸಿ ಕಿಸಾನ್ ಸೇಲ್ ರಾಜ್ಯ ಸಂಚಾಲಕ ಅಕ್ಮಲ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರಿನ ಷರೀಫ್ ಗಲ್ಲಿಯಲ್ಲಿರುವ  ಅಕ್ಮಲ್ ನಿವಾಸದ ಮೇಲೆ ಐಟಿ ದಾಳಿ ನಡೆಸಿದೆ. ಅಕ್ಮಲ್ ಮಾಲೀಕತ್ವದ  ಕಾಫಿ ಕ್ಯೂರಿಂಗ್ ಮೇಲೂ ಐಟಿ ದಾಳಿಯಾಗಿದೆ. 8 ಕಾರಿನಲ್ಲಿ ಬಂಧಿರುವ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ಮಲ್ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.it

 

Key words: IT –raids- checks – KPCC- Kisan Sale State Convener- residence.