Thursday, September 17, 2026

BDA Apartments

ಬೆಂಗಳೂರಿನಲ್ಲಿ ಇಂದು ನಾ ನಾಯಕಿ ಸಮಾವೇಶ: ಭಾಗಿಯಾಗಲಿರುವ ಪ್ರಿಯಾಂಕ ಗಾಂಧಿ BDA...
Home Front Page ಬೆಂಗಳೂರಿನಲ್ಲಿ ಇಂದು ನಾ ನಾಯಕಿ  ಸಮಾವೇಶ: ಭಾಗಿಯಾಗಲಿರುವ ಪ್ರಿಯಾಂಕ ಗಾಂಧಿ.

ಬೆಂಗಳೂರಿನಲ್ಲಿ ಇಂದು ನಾ ನಾಯಕಿ  ಸಮಾವೇಶ: ಭಾಗಿಯಾಗಲಿರುವ ಪ್ರಿಯಾಂಕ ಗಾಂಧಿ.

ನವದೆಹಲಿ,ಜನವರಿ,16,2023(www.justkannada.in): ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾ ನಾಯಕಿ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಮಾವೇಶವನ್ನ ಉದ್ಘಾಟಿಸಲಿದ್ದಾರೆ.

ಇಂದು  ಪ್ರಿಯಾಂಕಾ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬೃಹತ್ ಕಟೌಟ್​ಗಳು ರಾರಾಜಿಸುತ್ತಿವೆ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕ ಗಾಂಧಿ ಚಾಲನೆ ನೀಡಲಿದ್ದಾರೆ.ಬೆಂಗಳೂರಿನಲ್ಲಿ ಇಂದು ನಾ ನಾಯಕಿ ಸಮಾವೇಶ priyanka gandhi

ನಾ ನಾಯಕಿ ಸಮಾವೇಶದಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ಮಹಿಳಾ ಕಲ್ಯಾಣಕ್ಕಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಸಮಾವೇಶದಲ್ಲಿ ಸುಮಾರು 1 ಲಕ್ಷ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ .

Key words: Na Nayaki Samavesha – Bangalore-Priyanka Gandhi – participate