ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡರ ಪತ್ನಿ ಚೆನ್ನಮ್ಮರಿಗೆ ಐಟಿ ನೋಟಿಸ್:  ಹೆಚ್.ಡಿ ರೇವಣ್ಣ ಅಸಮಾಧಾನ.

ಹಾಸನ,ಮಾರ್ಚ್,28,2022(www.justkannada.in):  ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಆಸ್ತಿ ವಿವರದ ಬಗ್ಗೆ ಮಾಹಿತಿಯನ್ನು ನೀಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕೆಂಡಾಮಂಡಲರಾಗಿದ್ದಾರೆ. ಈ ಕುರಿತು ಹಾಸನದಲ್ಲಿ ಮಾತನಾಡಿರುವ ಹೆಚ್.ಡಿ ರೇವಣ್ಣ, ಆಸ್ತಿ ವಿವರ ಮಾಹಿತಿ ಕೇಳಿ  ಐಟಿ ನೋಟಿಸ್ ಜಾರಿ ಮಾಡಿದ್ದಾರೆ. ನಮ್ಮಪ್ಪ ನಮ್ಮ ಅಮ್ಮ ಕೋಟ್ಯಾಂತರ ರೂ ಆಸ್ತಿ ಮಾಡಿದ್ದಾರಾ..? ನಾವು ಕದ್ದು ವ್ಯವಸಾಯ ಮಾಡಿಲ್ಲ. ನಮ್ಮ ತಾಯಿಗೆ ನೋಟಿಸ್ ಕೊಡಬೇಡಿ ಎನ್ನಲ್ಲ. ಆದ್ರೇ ಇದಕ್ಕೆ ಉತ್ತರ ಕೊಡೋದು ಗೊತ್ತಿದೆ ನಮ್ಮ ತಾಯಿ ಕೋಟ್ಯಾಂತರ ರೂ ಆಸ್ತಿ ಮಾಡಿಲ್ಲ. ಇದು ರಾಜಕೀಯ ಷಡ್ಯಂತ್ರ ಎಂದು ಗುಡುಗಿದರು.

ಜೆಡಿಎಸ್ ನವರನ್ನ ಆರಿಸಿ ನೋಟಿಸ್ ನೀಡತ್ತಿದ್ದಾರೆ.  ನಾವು ಮಾಡೋದಾಗಿದ್ರೆ ಹಾಸನದಲ್ಲಿ ಎಷ್ಟು ಕೋಟಿ ಆಸ್ತಿ ಮಾಡಬಹುದಾಗಿತ್ತು. ನನಗೆ ನೋಟಿಸ್ ಕೊಟ್ಟರೂ ತಲೆ ಕೆಡಿಸಿಕೊಳ್ಳಲ್ಲ.  ದ್ವೇಷದ ರಾಜಕಾರಣ ಎಷ್ಟರ ಮಟ್ಟಿಗೆ ಇದೆ ನೋಡಿ ಎಂದು ಕಿಡಿಕಾರಿದ್ದಾರೆ.

Key words: IT-notice -Chennamma – former Prime Minister- HD Deve Gowda-wife