ಹಿಂದೂ , ಹಿಂದುತ್ವದ ಬಗ್ಗೆ ಅಪಮಾನ ಮಾಡುವವರಿಗೆ  ಈ ದೇಶದಲ್ಲಿ ಸ್ಥಾನಮಾನ ಇರಲ್ಲ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ನವೆಂಬರ್,11,2022(www.justkannada.in):   ಹಿಂದೂ ಪದದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಂತರ ಕ್ಷಮೆಯಾಚಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,ಹಿಂದೂ, ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡುತ್ತಾರೋ ಅಂತಹವರಿಗೆ ಈ ದೇಶದಲ್ಲಿ ಸ್ಥಾನಮಾನ ಇರಲ್ಲ.

ಕೆಲವರು ಧರ್ಮವನ್ನು ಉಳಿಸುತ್ತಾರೆ.  ಇಂದು ಕನಕದಾಸರ ಜಯಂತಿ ಇದೆ. ಕನಕದಾಸರು ಮೊದಲ ಹಿಂದುತ್ವ ಪ್ರತಿಪಾದಕರು.  ಸತೀಶ್ ಜಾರಕಿಹೊಳಿ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ರಾಮಾಯಣ ಮಹಾಭಾರತಕ್ಕೆ ಅಪಮಾನ ಮಾಡಿದ್ದಾರೆ. ಸತೀಶ್ ಹೇಳಿಕೆಯನ್ನು ಅವರ ಪಕ್ಷದ ನಾಯಕರೇ ಖಂಡಿಸಿದ್ದಾರೆ. ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ರಾಷ್ಟ್ರೀಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ ಎಂದು ಪ್ರಶ್ನಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೆ.ಎಸ್ ಈಶ್ವರಪ್ಪ, ಕೆಂಪೇಗೌಡ ಅತ್ಯಂತ ಒಳ್ಳೆಯ ಆಡಳಿತಗಾರರು. ಕೆಂಪೇಗೌಡರು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಕೆರೆ ಕಟ್ಟೆ ನಿರ್ಮಾಣ, ಪಾರ್ಕ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರೀಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ದಾರೆ. ಪರಿಸರವನ್ನು ಕಾಪಾಡಿದ ಆಡಳಿತದ ದಿಗ್ಗಜ ಕೆಂಪೇಗೌಡ. ಅಂತಹ ಆಡಳಿತಗಾರನ ಪ್ರತಿಮೆಯನ್ನು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವುದು ಬಹಳ ಗೌರವ ಎಂದು ತಿಳಿಸಿದರು.

Key words: insult -Hindus – no status – country- Former Minister-KS Eshwarappa.