ಕಾಲು ಜಾರಿ ಹೊಂಡದಲ್ಲಿ ಬಿದ್ದು ಬಾಲಕಿ ಮತ್ತು ಯುವತಿ ದುರ್ಮರಣ.

ಕಲ್ಬುರ್ಗಿ,ನವೆಂಬರ್,11,2022(www.justkannada.in):  ಕಾಲುಜಾರಿ ಹೊಂಡಕ್ಕೆ ಬಿದ್ದು ಬಾಲಕಿ ಮತ್ತು ಯುವತಿ ಸಾವನ್ನಪ್ಪಿರುವ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ.

ಕಲಬುರುಗಿ ಜಿಲ್ಲೆ  ಶಹಬಾದ್ ತಾಲ್ಲೂಕು ರಾಮಘಡ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಾಣಕಮ್ಮದಾಸರ(20),  ಕೀರ್ತೀಕಾ(12) ಮೃತಪಟ್ಟವರು. ಮೃತ ಇಬ್ಬರು ಬಟ್ಟೆ ತೊಳೆಯಲು ಹೊಂಡದ ಬಳಿ ಹೋಗಿದ್ದರು. ಈ ವೇಳೆ ಕಾಲು ಜಾರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: girl -young woman -died – slipping – falling – pit-kalburgi