ನಿಯಮ ಬಾಹಿರವಾಗಿ ಸ್ಪೋಟಕ ವಸ್ತು ಸಾಗಾಟ: ನಾಲ್ವರ ಬಂಧನ.

Promotion

ಚಿಕ್ಕಬಳ್ಳಾಪುರ,ಜೂನ್,3,2021(www.justkannada.in): ನಿಯಮ ಬಾಹಿರವಾಗಿ ಬೈಕ್ ನಲ್ಲಿ ಸ್ಪೋಟಕ ವಸ್ತು ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.jk

ಆಂಧ್ರ ಪ್ರದೇಶ ಮೂಲದ ರಮೇಶ್ ,ವೆಂಕಟೇಶ್, ವೇಣು, ಯಾದಗಿರಿ ಬಂಧಿತ ಆರೋಪಿಗಳು. ಚಿಕ್ಕಬಳ್ಳಾಪುರ ಚಿಂತಾಮಣಿ ತಾಲ್ಲೂಕಿನ ಸೋಮಕಲ್ಲಹಳ್ಳಿಯಲ್ಲಿ ನಾಲ್ವರನ್ನ ಬಂಧಿಸಲಾಗಿದ್ದು ಬಂಧಿತರಿಂದ 600 ಜಿಲೆಟಿನ್ ಕಡ್ಡಿ  ಎರಡು ಬೈಕ್ ಗಳನ್ನ ಪೊಲೀಸರು  ವಶಕ್ಕೆ ಪಡೆದಿದ್ದಾರೆ.Six- arrested -covid -fake report-bangalore

ಬಂಧಿತರು ಮದನಪಲ್ಲಿಯಿಂದ ದಿಬ್ಬೂರಹಳ್ಳಿಗೆ ಬೈಕ್ ನಲ್ಲಿ ಸ್ಪೋಟಕ ವಸ್ತು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Illegal- Explosive- carry -Arrest -four