ಟೈಗರ್ ಶ್ರಾಫ್-ದಿಶಾ ಪಟಾನಿಗೆ ಎಫ್ಐಆರ್ ಕಂಟಕ!

ಬೆಂಗಳೂರು, ಜೂನ್ 03, 2021 (www.justkannada.in): ಟೈಗರ್‌ ಶ್ರಾಫ್‌ ಮತ್ತು ದಿಶಾ ಪಟಾನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಲಾಕ್ ಡೌನ್ ಇದ್ದರೂ ಮುಂಬೈನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಇಬ್ಬರು ಸುತ್ತಾಡುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರಿನಲ್ಲಿ ಸುತ್ತಾಡುತ್ತಿದ್ದ ವೇಳೆ ಪೊಲೀಸರು ಇಬ್ಬರನ್ನು ತಡೆದಿದ್ದಾರೆ. ಈ ವೇಳೆ ಇಬ್ಬರೂ ಸರಿಯಾದ ಕಾರಣ ನೀಡದ ಹಿನ್ನಲ್ಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಮಂಗಳವಾರ ಸಂಜೆ ವರ್ಕೌಟ್‌ ಮುಗಿಸಿ ಜಿಮ್‌ನಿಂದ ವಾಪಸ್‌ ಆಗುವ ವೇಳೆ ಇಬ್ಬರು ಕಾರಿನಲ್ಲಿ ಬಾಂದ್ರಾದ ರಸ್ತೆಗಳಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗಿದೆ.