ಐಸಿಸಿ ಟೆಸ್ಟ್ ಬ್ಯಾಟಿಂಗ್‌ ಶ್ರೇಯಾಂಕ: ಕೊಯ್ಲಿ ಹಿಂದಿಕ್ಕಿದ ಸ್ಟೀವನ್‌ ಸ್ಮಿತ್

Promotion

ಬೆಂಗಳೂರು, ಜನವರಿ 13, 2020 (www.justkannada.in): ಐಸಿಸಿ ನೂತನ ಬ್ಯಾಟಿಂಗ್‌ ಶ್ರೇಯಾಂಕ ಪಟ್ಟಿ ಯಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ.

ಭಾರತದ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ ನಲ್ಲಿ ಅರ್ಧ ಶತಕ ದಾಖಲಿಸಿದ್ದ ಸ್ಮಿತ್ ಕೊಯ್ಲಿ ಸ್ಥಾನಕ್ಕೆ ಜಿಗಿದಿದ್ದಾರೆ.

ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಮೊದಲ ಸ್ಥಾನದಲ್ಲಿದ್ದಾರೆ. ಚೇತೇಶ್ವರ್‌ ಪೂಜಾರ ಎರಡು ಸ್ಥಾನಗಳ ಏರಿಕೆ ಕಂಡಿದ್ದು 8ನೇ ಸ್ಥಾನದಲ್ಲಿದ್ದಾರೆ.

3ನೇ ಟೆಸ್ಟ್ ನಲ್ಲಿ ಉತ್ತಮ ಆಟವಾಡಿದ ಪಂತ್‌ 19 ಸ್ಥಾನಗಳ ಏರಿಕೆ ಕಂಡಿದ್ದು 26ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.